ADVERTISEMENT

ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ವಿಚಾರಣೆ ಕನಕಪುರದಲ್ಲೇ ನಡೆಯಲಿ : ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 11:03 IST
Last Updated 18 ಡಿಸೆಂಬರ್ 2019, 11:03 IST
   

ಬೆಂಗಳೂರು:ಶಾಸಕ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ಜಾರಿಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಗೌರಮ್ಮ ಅವರನ್ನು ಅವರ ನಿವಾಸದಲ್ಲೇ ವಿಚಾರಣೆ ನಡೆಸಬೇಕೆಂದು ಬುಧವಾರ ಆದೇಶ ನೀಡಿದೆ.

ಅಲ್ಲದೆ,ಕನಕಪುರದ ಸ್ವಗೃಹದಲ್ಲೇ ಗೌರಮ್ಮ ವಿಚಾರಣೆ ನಡೆಸಬೇಕು. ಇಡಿ ಅಧಿಕಾರಿಗಳ ವಿಚಾರಣೆ ಕನ್ನಡದಲ್ಲಿಯೇ ಇರಬೇಕು. ಅಲ್ಲದೆ, ವಿಚಾರಣೆಯನ್ನು ಸಂಪೂರ್ಣ ಆಡಿಯೋ ರೆಕಾರ್ಡಿಂಗ್ ಮಾಡಬೇಕು ಎಂದು ತಿಳಿಸಿದೆ.

ಅಲ್ಲದೆ, ಇಡಿ ಅಧಿಕಾರಿಗಳಿಗೆ ರಾಮನಗರ ಎಸ್ಪಿ ಭದ್ರತೆ ನೀಡಬೇಕು. ಇ.ಡಿ ಅಧಿಕಾರಿಗಳ ವಿಚಾರಣೆಗೆ ಯಾವುದೇ ರೀತಿಯ ಅಡ್ಡಿಪಡಿಸುವಂತಿಲ್ಲ.ಯಾರೂ ಯಾವುದೇ ಪ್ರತಿಭಟನೆ, ವಿರೋಧ ಮಾಡುವಂತಿಲ್ಲ.

ADVERTISEMENT

"ನನಗೆ 85 ವರ್ಷವಾಗಿರುವ ಕಾರಣ ನನ್ನ ಪರವಾಗಿ ಪ್ರತಿನಿಧಿ ಕಳುಹಿಸಿಕೊಡಲು ಅವಕಾಶ ಕಲ್ಪಿಸಬೇಕು ಇಲ್ಲವೇ ಸ್ವಗೃಹದಲ್ಲಿ ವಿಚಾರಣೆಗೆ ಅನುಮತಿ ನೀಡಬೇಕು" ಎಂದು ಗೌರಮ್ಮ ರಿಟ್ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಈ ಸಂಬಂಧ ಈ ಮೊದಲು ಗೌರಮ್ಮ ಸಲ್ಲಿಸಿದ್ದ ಮನವಿಗೆ ಇ.ಡಿ ಅಧಿಕಾರಿಗಳು ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.