ADVERTISEMENT

ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್‌ ಪೂರೈಕೆ: ಜೋಶಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 20:12 IST
Last Updated 24 ಏಪ್ರಿಲ್ 2021, 20:12 IST
   

ಹುಬ್ಬಳ್ಳಿ: ‘ಆಕ್ಸಿಜನ್ ದೊರೆಯುತ್ತಿಲ್ಲ ಎಂದು ಯಾರೂ ಭಯಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲ ಜನಕ ಪೂರೈಸಲು ಕ್ರಮ ವಹಿಸಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೊಡ್ಡ ನಗರಗಳಲ್ಲಿ ಆಮ್ಲಜನಕದ ಕೊರತೆ ಆಗಿರುವುದು ಸತ್ಯ. ಕೇಂದ್ರ ಸರ್ಕಾರ ರಾಜ್ಯದ ವಿಚಾರದಲ್ಲೂ ಕೇಂದ್ರ ಮುತುವರ್ಜಿ ವಹಿಸಿದೆ. ಆರೋಗ್ಯ ಸಚಿವರು ನಿರಂತರ ಸಂರ್ಪಕದಲ್ಲಿದ್ದಾರೆ. ಬಳ್ಳಾರಿಯ ಕಾರ್ಖಾನೆಗಳಲ್ಲಿ ತಯಾರಾಗುತ್ತಿರುವ ಆಕ್ಸಿಜನ್ ಪಡೆಯಲು ಮಾತುಕತೆ ನಡೆದಿದೆ’ ಎಂದರು.

‘ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಅಗತ್ಯವಿದ್ದಷ್ಟು ಲಸಿಕೆ ಪೂರೈಕೆ ಮಾಡುತ್ತಿದೆ. ರೆಮ್‌ಡಿಸಿವಿರ್ ಕೋವಿಡ್‌ಗೆ ಅಂತಿಮ ಪರಿಹಾರವಲ್ಲ. ಅದು ಕೊರತೆಯಾಗಿದೆ ಎಂದು ಕೆಲವರು ಗಾಬರಿ ಹುಟ್ಟಿಸುತ್ತಿದ್ದಾರೆ. ಕೋವಿಡ್‌ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ, ಜಾಗೃತರಾಗಿರಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.