ADVERTISEMENT

Covid-19 Karnataka Update | ರಾಜ್ಯದಲ್ಲಿಂದು 101 ಪ್ರಕರಣ, ಸೋಂಕಿತರು 2,283

​ಪ್ರಜಾವಾಣಿ ವಾರ್ತೆ
Published 26 ಮೇ 2020, 12:28 IST
Last Updated 26 ಮೇ 2020, 12:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೇ 25ರ ಸಂಜೆ 5ಗಂಟೆಯಿಂದ ಮೇ 26ರ ಸಂಜೆ 5 ಗಂಟೆವರೆಗೆ ಹೊಸ 101 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ 2,283 ಮಂದಿಗೆ ಸೋಂಕು ತಗುಲಿದ್ದು, 46 ಮಂದಿ ಮೃತಪಟ್ಟಿದ್ದಾರೆ.

ಇವರೆಗೆ 748 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,489 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ADVERTISEMENT

ಇಂದು ಬೆಂಗಳೂರು ನಗರದಲ್ಲಿ 2, ಬೆಳಗಾವಿ 13, ಯಾದಗಿರಿ 14, ದಾವಣಗೆರೆ 11, ಹಾಸನ 13, ಉಡುಪಿ 3, ಬೀದರ್‌ 10, ವಿಜಯಪುರ 6, ಚಿತ್ರದುರ್ಗ 20, ಕೋಲಾರ 2, ಬಳ್ಳಾರಿ 1, ಕೊಪ್ಪಳ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.