ADVERTISEMENT

ಹೆಣ್ಣು ಮಕ್ಕಳಿಗೆ ಅಪಮಾನವಾಗಿದ್ದರೆ ಈ ಕ್ಷಣವೇ ರಾಜೀನಾಮೆ: ಸಿಎಂ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 13:09 IST
Last Updated 19 ನವೆಂಬರ್ 2018, 13:09 IST
   

ಬೆಂಗಳೂರು:ಹೋರಾಟಗಾರ್ತಿಯನ್ನು ಉದ್ದೇಶಿಸಿ ಭಾನುವಾರ ತಾವು ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ‘ನನ್ನ ಹೇಳಿಕೆ ಬಗ್ಗೆ ಬಾರಿ ಚರ್ಚೆಯಾಗಿದೆ. ಹೇಳಿಕೆ ವಾಪಸ್‌ ಪಡೆಯಬೇಕಿದ್ದರೆ ಪಡೆಯುತ್ತೇನೆ. ಹೆಣ್ಣು ಮಕ್ಕಳಿಗೆ ಅಪಮಾನವಾಗಿದ್ದರೆ ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ’ ಎಂದಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ವೈಯಕ್ತಿಕವಾಗಿಯೂ ಮಹಿಳೆಯರಿಗೆ ಅಪಮಾನ ಮಾಡಿಲ್ಲ. ಪ್ರತಿಯೊಬ್ಬರೊಂದಿಗೂ ಗೌರವದಿಂದಲೇ ನಡೆದುಕೊಂಡಿದ್ದೇನೆ.ನಾನೇನು ಅಂತಹ ತಪ್ಪು ಪದವನ್ನು ಬಳಿಸಿದ್ದೇನೆ?ಎನ್ನುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ADVERTISEMENT

ಪ್ರತಿಭಟನಾನಿರತರು ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರತಿಭಟನಾನಿರತರು ನನ್ನನ್ನು ನಾಲಾಯಕ್‌ ಮುಖ್ಯಮಂತ್ರಿ ಎಂದಿದ್ದಾರೆ.ಸುವರ್ಣ ವಿಧಾನಸೌಧದ ಬೀಗ ಒಡೆಯಲು ಪ್ರಯತ್ನಿಸಿದರು. ಅಲ್ಲಿಯವರೆಗೆ ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಂಡಿರಲಿಲ್ಲ.ಬೀಗ ಒಡೆಯುವುದುಕಾನೂನುಬಾಹಿರವಲ್ಲವೇ? ಎಂದು ಪ್ರಶ್ನಿಸಿದರು.ಪ್ರತಿಭಟನಾನಿರತರು ತಮ್ಮ ಪ್ರತಿಕೃತಿಗೆ ಕೊಡಲಿಯಿಂದ ಹೊಡೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಗೊಂದಲ ಸೃಷ್ಟಿಸುತ್ತಿಲ್ಲಎಂದು ಹೇಳಿದ ಸಿಎಂ,ಸಾಲಮನ್ನಾ ವಿಚಾರವಾಗಿ ಹಲವು ಕ್ರಮ ಕೈಗೊಂಡಿದ್ದೇನೆ. ಅದಕ್ಕಾಗಿಹಣ ಹೇಗೆ ಹೊಂದಿಸುತ್ತೇನೆ ಎನ್ನುವವುದರ ಬಗ್ಗೆ ಈಗಾಗಲೇ ಹೇಳಿದ್ದೇನೆ. ಕಬ್ಬಿನ ಬಾಕಿ ಹಣ ಪಾವತಿ ಸಂಬಂಧವಾಗಿಯೂಚಿಂತನೆ ನಡೆಸಲಾಗಿದೆಎಂದು ಹೇಳಿದರು.

ನನ್ನ ಜವಾಬ್ದಾರಿ ಬಗ್ಗೆ ನನಗೆ ಅರಿವಿದೆ.ಮಹಿಳೆಯರು ಮತ್ತು ರೈತರಿಗೆ ಗೌರವ ನೀಡುವುದನ್ನು ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ. ನೀವು(ಬಿಜೆಪಿಯವರು) ರೈತರನ್ನು ಹೇಗೆ ನಡೆಸಿಕೊಂಡಿದ್ದೀರಿ ಎಂಬುದು ಗೊತ್ತಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಮಾತು

‘ಆಡಳಿತ ನಡೆಸಲು ಕುಮಾರಸ್ವಾಮಿ ನಾಲಾಯಕ್‌ ಎಂದು ಮಹಿಳೆಯೊಬ್ಬಳು ನನ್ನನ್ನು ನಿಂದಿಸಿದ್ದಾಳೆ. ನಾಲ್ಕೂವರೆ ವರ್ಷಗಳ ಹಿಂದೆ ಯಾವುದೋ ಕಂಪನಿಯವರು ಕಬ್ಬಿಗೆ ಸರಿಯಾದ ದರ ನೀಡಿಲ್ಲ ಎಂಬ ಕಾರಣಕ್ಕೆ ನಾನು ಹೇಗೆ ನಾಲಾಯಕ್‌ ಆಗುತ್ತೇನೆ? ಇದಕ್ಕೂ ನನಗೂ ಏನು ಸಂಬಂಧ? ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು’ ಎಂದು ಕುಮಾರಸ್ವಾಮಿ ಅವರು ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಅವರನ್ನು ಕಟು ಮಾತುಗಳಲ್ಲಿ ಭಾನುವಾರ ಜರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.