ADVERTISEMENT

ಕಿಸಾನ್ ಸಮ್ಮಾನ್‌: ಫಲಾನುಭವಿಗಳ ಸಂಖ್ಯೆ 6 ಲಕ್ಷ ಕುಸಿತ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 0:00 IST
Last Updated 11 ಡಿಸೆಂಬರ್ 2024, 0:00 IST
   

ನವದೆಹಲಿ: ಕರ್ನಾಟಕದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯ (ಪಿಎಂ–ಕಿಸಾನ್‌) ಫಲಾನುಭವಿಗಳ ಸಂಖ್ಯೆ ಐದು ಲಕ್ಷದಿಂದ ಆರು ಲಕ್ಷದಷ್ಟು ಕುಸಿತವಾಗಿದೆ. 

ಲೋಕಸಭೆಯಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್‌ ಮಂಗಳವಾರ ಕೇಳಿದ ಪ್ರಶ್ನೆಗೆ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್‌ ಠಾಕೂರ್‌ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. 13ನೇ ಕಂತಿನವರೆಗೆ (2023ರ ಮಾರ್ಚ್) ರಾಜ್ಯದ ಫಲಾನುಭವಿಗಳ ಸಂಖ್ಯೆ 49 ಲಕ್ಷದಷ್ಟು ಇತ್ತು. 14ನೇ ಕಂತಿನಲ್ಲೂ ಫಲಾನುಭವಿಗಳ ಸಂಖ್ಯೆ 49.34 ಲಕ್ಷ ಆಗಿತ್ತು. 15ನೇ ಕಂತಿನಲ್ಲಿ ಈ ಸಂಖ್ಯೆ 43.78 ಲಕ್ಷಕ್ಕೆ ಕುಸಿಯಿತು. ಆ ಬಳಿಕ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿಲ್ಲ. 

ಪಿಎಂ– ಕಿಸಾನ್‌ ಯೋಜನೆಯಡಿ ಕೃಷಿಕರಿಗೆ ವಾರ್ಷಿಕ ₹6 ಸಾವಿರ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಈ ಮೊತ್ತವನ್ನು ₹8 ಸಾವಿರ ಅಥವಾ ₹12 ಸಾವಿರಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.