ADVERTISEMENT

SC/ST ಮೀಸಲಾತಿ ಹೆಚ್ಚಳ ದೀಪಾವಳಿ ಗಿಫ್ಟ್‌ -ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 10:29 IST
Last Updated 24 ಅಕ್ಟೋಬರ್ 2022, 10:29 IST
ಸಚಿವ ಅಶೋಕ
ಸಚಿವ ಅಶೋಕ   

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಾಗದೇ ಇರುವಂತೆ ಪ್ರಯತ್ನಿಸಿದವರೂ ಇದ್ದಾರೆ, ಆದರೆ ನಮ್ಮ ಮುಖ್ಯಮಂತ್ರಿ ಚಾಣಕ್ಯರು, ಚಾಣಕ್ಯ ವಿದ್ಯೆ ಪ್ರಯೋಗ ಮಾಡಿ, ಮೀಸಲಾತಿ ಹೆಚ್ಚಳದ ದೃಢ ನಿರ್ಧಾರ ತೆಗೆದುಕೊಂಡಿದ್ದು ಅಲ್ಲದೆ, ಸುಗ್ರೀವಾಜ್ಞೆಯನ್ನೂ ಹೊರಡಿಸಿದರು’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ 257 ದಿನಗಳಿಂದ ಹೋರಾಟ ನಡೆಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಸರ್ಕಾರದ ಆದೇಶ ಪ್ರತಿಯನ್ನು ನೀಡಿ ಮಾತನಾಡಿದರು.

‘ನೀವು (ಸ್ವಾಮೀಜಿ) ಇಲ್ಲೇ ಕಾಯಂ ಹೋರಾಟ ಮಾಡಬೇಕು ಎಂದು ಬಹಳಷ್ಟು ಜನ ಬಯಸಿದ್ದರು. ಅವರ ಉದ್ದೇಶ ಮೀಸಲಾತಿ ಪ್ರಮಾಣ ಹೆಚ್ಚಿಸಬಾರದು ಮತ್ತು ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕು ಎಂಬುದೇ ಆಗಿತ್ತು. ಆದರೆ, ನಮ್ಮ ಮುಖ್ಯಮಂತ್ರಿ ಚಾಣಕ್ಯರು, ಯಾವ ಸಮಯದಲ್ಲಿ ಏನು ಮಾಡಬೇಕು. ಕಲ್ಲು ಹೊಡೆದರೆ ಮಾವಿನಕಾಯಿ ಬೀಳಬೇಕು ಎಂಬುದು ಅವರಿಗೆ ಗೊತ್ತು’ ಎಂದು ಅವರು ಹೇಳಿದರು. ಪ್ರತಿಭಟನೆಯನ್ನು ಕೈಬಿಟ್ಟು, ದೀಪಾವಳಿಯನ್ನು ಆಚರಿಸಿ. ಇದು ದೀಪಾವಳಿಯ ಕೊಡುಗೆ ಎಂದು ಅಶೋಕ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.