ADVERTISEMENT

'ಪ್ರಜಾವಾಣಿ' ಓದುಗರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 4:58 IST
Last Updated 6 ಜನವರಿ 2020, 4:58 IST
   

ಬೆಂಗಳೂರು: ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ‘ಪ್ರಜಾವಾಣಿ’ ಹಾಗೂ ಅದರ ಸೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ನ ಒಟ್ಟಾರೆ ಓದುಗರ ಸಂಖ್ಯೆಯು ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ 2.30 ಲಕ್ಷದಷ್ಟು ಏರಿಕೆಯಾಗಿದೆ ಎಂದು ಓದುಗರ ಸಮೀಕ್ಷೆ (ಇಂಡಿಯನ್‌ ರೀಡರ್‌ಶಿಪ್‌ ಸರ್ವೆ– ಐಆರ್‌ಎಸ್‌) ಹೇಳಿದೆ.

ಎರಡನೇ ತ್ರೈಮಾಸಿಕದ ಅಂಕಿ ಅಂಶಕ್ಕೆ ಹೋಲಿಸಿದರೆ, ‘ಪ್ರಜಾವಾಣಿ’ಯ ಓದುಗರ ಸಂಖ್ಯೆಯು ಮೂರನೇ ತ್ರೈಮಾಸಿಕದಲ್ಲಿ 1.77 ಲಕ್ಷದಷ್ಟು ಹೆಚ್ಚಳವಾಗಿದೆ.

ಡೆಕ್ಕನ್‌ ಹೆರಾಲ್ಡ್‌ ಓದುಗರ ಸಂಖ್ಯೆಯು 53,000ದಷ್ಟು ಏರಿಕೆಯಾಗಿದೆ ಎಂದು ಐಆರ್‌ಎಸ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.