
ಪ್ರಜಾವಾಣಿ ವಾರ್ತೆ
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ 165 ವಿಮಾನಗಳು ಶನಿವಾರ ರದ್ದಾಗಿದೆ. ಸಹಾಯ ಕೇಂದ್ರದಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು.
ಬೆಂಗಳೂರಿಗೆ ಶನಿವಾರ ಬರಬೇಕಿದ್ದ ಒಟ್ಟು 86 ವಿಮಾನಗಳು ರದ್ದಾಗಿವೆ. ಇಲ್ಲಿಂದ ಹೊರಡಬೇಕಿದ್ದ 79 ವಿಮಾನಗಳ ಕಾರ್ಯಾಚರಣೆ ರದ್ದು ಮಾಡಲಾಗಿದೆ.
ಟರ್ಮಿನಲ್‌ಗಳಲ್ಲಿ ಕಾದು ಕುಳಿತಿದ್ದ ಪ್ರಯಾಣಿಕರಿಗೆ ಸಿಬ್ಬಂದಿ ಆಸನ, ಊಟದ ವ್ಯವಸ್ಥೆ ಮಾಡಿದ್ದರು. ಅವರ ಸಮಸ್ಯೆಗಳನ್ನು ಬಗೆಹರಿಸಿ ಪ್ರಯಾಣದ ಟಿಕೆಟ್ ಮರು ಹೊಂದಾಣಿಕೆ ಹಾಗೂ ರದ್ದು ಮಾಡಿದ ಟಿಕೆಟ್ ಹಣದ ಮರು ಪಾವತಿಗಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.