ADVERTISEMENT

ಸುಧಾಮೂರ್ತಿ ವಿರುದ್ಧ ಫೇಸ್‌ಬುಕ್ ಪೋಸ್ಟ್‌: ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 9:00 IST
Last Updated 14 ಆಗಸ್ಟ್ 2019, 9:00 IST
   

ಗಜೇಂದ್ರಗಡ (ಗದಗ ಜಿಲ್ಲೆ): ಪುರಸಭೆ ಮಾಜಿ ಸದಸ್ಯ ಎಂ.ಎಸ್.ಹಡಪದ ಎಂಬುವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಟೀಕಿಸಿ ಬರೆದ ಪೋಸ್ಟ್‌ಗೆ, ಆಕ್ರೋಶ ವ್ಯಕ್ತವಾಗಿದೆ.

‘ಸರ್ಕಾರ ಬಡತನ ಹಾಗೂ ನಿರುದ್ಯೋಗ ತೊಲಗಿಸಲು ಮುಂದಾದರೆ ಸುಧಾಮೂರ್ತಿ ಅಂಥಾ ಸೋಗಲಾಡಿ ಸಮಾಜ ಸುಧಾರಕಿಯರ ಅವಶ್ಯಕತೆ ಇರುವುದಿಲ್ಲ’ ಎಂದು ಹಡಪದ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಳಕೆದಾರರು, ಸುಧಾ ಬೆಂಬಲಕ್ಕೆ ನಿಂತಿದ್ದು, ಹಡಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ.

‘ಖಾಸಗಿ ವ್ಯಕ್ತಿಗಳು, ಎನ್‌ಜಿಒಗಳು ಮಾಡುವ ಕೆಲಸ ಸರ್ಕಾರಕ್ಕೆ ಆಗುತ್ತಿಲ್ಲ ಎಂದಾದರೆ, ಜನರ ತೆರಿಗೆ ಹಣದಿಂದ ನಡೆಯುತ್ತಿರುವ ಈ ಸರ್ಕಾರ ಏಕೆ ಬೇಕು? ಇದನ್ನು ಪ್ರಶ್ನಿಸಿದರೆ ನಾನೊಬ್ಬ ದೇಶದ್ರೋಹಿ ಆಗುತ್ತೇನೆ. ಇದೊಂದು ವ್ಯವಸ್ಥಿತ ಜಾಲವಾಗಿದೆ. ಸುಧಾಮೂರ್ತಿ ಅವರನ್ನು ನಿಂದಿಸುವ ಉದ್ದೇಶ ಇಲ್ಲ. ಅವರ ಬಗ್ಗೆ ಗೌರವ ಇದೆ’ ಎಂದು ಹಡಪದ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.