ADVERTISEMENT

ರಾಜ್ಯದಲ್ಲಿ ಹೂಡಿಕೆಗೆ ಬ್ರಿಟನ್ ಕಂಪನಿಗಳಿಗೆ ಆಹ್ವಾನ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 17:52 IST
Last Updated 1 ಡಿಸೆಂಬರ್ 2022, 17:52 IST
   

ಬೆಂಗಳೂರು: ಬ್ರಿಟನ್‌ ದೇಶದ ಹೂಡಿಕೆದಾರರು ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನಾ ಘಟಕಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ತಮ್ಮನ್ನು ಭೇಟಿಯಾದ ಭಾರತದ ಬ್ರಿಟಿಷ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್‌ ಹಾಗೂ ಕರ್ನಾಟಕ ಮತ್ತು ಕೇರಳದ ನೂತನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್‌ ಆಗಿ ನೇಮಕಗೊಂಡಿರುವ ಚಂದ್ರ ಅಯ್ಯರ್‌ ಅವರ ಜತೆ ಮಾತುಕತೆ ನಡೆಸಿದರು.

ಕರ್ನಾಟಕವು ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಹೊಂದಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಗೂ ಹೊಸ ನೀತಿಯನ್ನು ಜಾರಿಗೆ ತರಲಾಗಿದೆ. ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆಯೂ ಸಲಹೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಬ್ರಿಟಿಷ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್‌ ಹಾಗೂ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್‌ ಅವರು ಬ್ರಿಟನ್‌ ಮತ್ತು ಕರ್ನಾಟಕ ನಡುವಿನ ಬಾಂಧವ್ಯ ವಿಶೇಷವಾದುದು. ಕರ್ನಾಟಕದಲ್ಲಿರುವ ಬ್ರಿಟಿಷ್ ಕಂಪನಿಗಳ ಸಂಖ್ಯೆ ಗಣನೀಯವಾಗಿದೆ. ವರದಿ ಪ್ರಕಾರ 618 ಬ್ರಿಟಿಷ್‌ ಮಾಲೀಕತ್ವದ ಕಂಪನಿಗಳಲ್ಲಿ ಶೇ 14 ರಷ್ಟು ಕರ್ನಾಟಕದಲ್ಲಿದ್ದು, ದಕ್ಷಿಣ ಭಾರತದಲ್ಲಿಯೇ ಇದು ಹೆಚ್ಚು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.