ADVERTISEMENT

ಜಲಜೀವನ್‌ ಮಿಷನ್‌ ಅಕ್ರಮ | 99 ಗುತ್ತಿಗೆದಾರರ ವಿರುದ್ಧ ಕ್ರಮ: ವಿ.ಸೋಮಣ್ಣ

ಉತ್ತರ ಪ್ರದೇಶದಲ್ಲೇ ಶೇ 84ರಷ್ಟು ದೂರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 14:28 IST
Last Updated 1 ಡಿಸೆಂಬರ್ 2025, 14:28 IST
<div class="paragraphs"><p>ಜಲಜೀವನ್‌ ಮಿಷನ್ </p></div>

ಜಲಜೀವನ್‌ ಮಿಷನ್

   

ನವದೆಹಲಿ: ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಅಕ್ರಮ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ ಕಾರಣಕ್ಕೆ ಕರ್ನಾಟಕದಲ್ಲಿ 99 ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. 

ಲೋಕಸಭೆಯಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ‌ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ‘ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 169 ದೂರುಗಳು ಸಲ್ಲಿಕೆಯಾಗಿವೆ. ಒಂಬತ್ತು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಒಂದು ಪ್ರಕರಣದ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲಾಗಿದೆ‘ ಎಂದರು. 

ADVERTISEMENT

ಯೋಜನೆಯ ಅನುಷ್ಠಾನದಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸಿ 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 17,036 ದೂರುಗಳು ಬಂದಿವೆ. ಈ ಪೈಕಿ ಶೇ 8ರಷ್ಟು ದೂರುಗಳು ಉತ್ತರ ಪ್ರದೇಶದಿಂದಲೇ (14,212) ಸಲ್ಲಿಕೆಯಾಗಿವೆ. ಈ ರಾಜ್ಯದಲ್ಲಿ 171 ಅಧಿಕಾರಿಗಳು ಹಾಗೂ 119 ಗುತ್ತಿಗೆದಾರರ ವಿರುದ್ಧ ಕ್ರಮ ವಹಿಸಲಾಗಿದೆ. 143 ಪ್ರಕರಣಗಳನ್ನು ಸ್ವತಂತ್ರ ಸಂಸ್ಥೆಗಳು ತನಿಖೆ ನಡೆಸಿವೆ ಎಂದು ಅವರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.