ADVERTISEMENT

ಶಿಕ್ಷೆಗೆ ತಡೆ; ಜನಾರ್ದನ ರೆಡ್ಡಿ ಶಾಸಕತ್ವ ಅಮಾನತು ಆದೇಶ ವಾಪಸ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 9:35 IST
Last Updated 20 ಜೂನ್ 2025, 9:35 IST
<div class="paragraphs"><p>ಜನಾರ್ದನ ರೆಡ್ಡಿ</p></div>

ಜನಾರ್ದನ ರೆಡ್ಡಿ

   

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಕಾರಣ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಬಿಜೆಪಿ ಶಾಸಕ ಜಿ.ಜನಾರ್ದನರೆಡ್ಡಿ ಅವರ ಅನರ್ಹತೆ ಆದೇಶವನ್ನು ಕರ್ನಾಟಕ ವಿಧಾನಸಭೆ ಹಿಂದಕ್ಕೆ ಪಡೆದಿದೆ.

ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿಗೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಅನರ್ಹತೆ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ತೀರ್ಪಿಗೆ ಮೇಲಿನ ನ್ಯಾಯಾಲಯ ತಡೆ ನೀಡಿದರೆ ಅಥವಾ ರದ್ದು ಮಾಡಿದರೆ, ಅಮಾನತು ಆದೇಶ ಹಿಂಪಡೆಯಬಹುದಾಗಿದೆ ಎಂದು ವಿಧಾನಸಭೆ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.