ADVERTISEMENT

ಜೆಡಿಎಸ್‌ ನಂಬಿ ಸೋತೆ: ವೀರಪ್ಪ ಮೊಯಿಲಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 20:08 IST
Last Updated 14 ಜೂನ್ 2022, 20:08 IST
ಎಂ. ವೀರಪ್ಪ ಮೊಯಿಲಿ
ಎಂ. ವೀರಪ್ಪ ಮೊಯಿಲಿ   

ದೊಡ್ಡಬಳ್ಳಾಪುರ: ‘2019ರ ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮನೆಗೆ ಹೋಗಿ ಬೆಂಬಲ ನೀಡುವಂತೆ ಕೇಳಿದ್ದೇ ನನ್ನ ರಾಜಕೀಯ ಜೀವನದಲ್ಲಿ ಮಾಡಿದ ಬಹುದೊಡ್ಡ ತಪ್ಪು. ಆ ಪಕ್ಷದೊಂದಿಗಿನ ಹೊಂದಾಣಿಕೆಯಿಂದ ನಾನೂ ಸೋತೆ. ಜೊತೆಗೆ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತಾಯಿತು’ ಎಂದು ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿ ಹೇಳಿದರು.

ನಗರದಲ್ಲಿ ಮಂಗಳವಾರ ಪ್ರಾರಂಭವಾದ ಕಾಂಗ್ರೆಸ್‌ ನವ ಚಿಂತನಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತ
ನಾಡಿದರು.

‘ದೇವೇಗೌಡರು ದ್ವೇಷದ ರಾಜಕಾರಣ ಮಾಡುವುದರಲ್ಲಿ ಸಿದ್ಧಹಸ್ತರು. ಅವರನ್ನು ಪ್ರಧಾನಿ ಮಾಡಿದ ಪಕ್ಷದ ಮುಖಂಡರ ಮೇಲೆಯೇ ದೂರು ದಾಖಲಿಸಲು ಆರಂಭಿಸಿದರು. ಇದರಿಂದಾಗಿಯೇ ಪ್ರಧಾನಿ ಪಟ್ಟ ಕಳೆದುಕೊಂಡರು. ವಿರೋಧಿಗಳ ವಿರುದ್ಧ ದೂರು ದಾಖಲಿಸುವ ಪ್ರವೃತ್ತಿಯನ್ನು ಇಂದಿಗೂ ಅವರು ಬಿಟ್ಟಿಲ್ಲ’ ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.