ADVERTISEMENT

Video|ದೇವೇಗೌಡರ ಜನ್ಮದಿನವಾದ ಮೇ 18ರಂದು ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ: ಎಚ್‌ಡಿಕೆ

ಪ್ರಜಾವಾಣಿ ವಿಶೇಷ
Published 8 ಮೇ 2023, 14:17 IST
Last Updated 8 ಮೇ 2023, 14:17 IST

ಮೇ 18 ದೇವೇಗೌಡರ ಜನ್ಮದಿನ. ಅಂದೇ ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಸೋಮವಾರ ಜೆಡಿಎಸ್‌ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಎಲ್ಲ ಜನವಿರೋಧಿ ಕಾರ್ಯಕ್ರಮವನ್ನೂ ರದ್ದುಪಡಿಸಲಾಗುವುದು. ಮುಖ್ಯಮಂತ್ರಿ ಆದರೂ ಬೆಂಗಳೂರಿನ ಸರ್ಕಾರಿ ಬಂಗಲೆ, ಹೋಟೆಲ್‌ಗಳಲ್ಲಿ ಇರುವುದಿಲ್ಲ. ಬಿಡದಿಯ ಕೇತಗಾನಹಳ್ಳಿಯ ಮನೆಯಲ್ಲಿಯೇ ಇರುತ್ತೇನೆ. ಯಾರು ಬೇಕಾದರೂ ಬಂದು ನನ್ನಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಬಹುದು’ ಎಂದರು.

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT