ADVERTISEMENT

ರಾಜ್ಯ ಸರ್ಕಾರ ಅಸ್ಥಿರವಾದರೆ ಲಾಭ ಪಡೆಯಲು ಯತ್ನ: ಜೆಡಿಎಸ್‌ ಶಾಸಕ ಎ.ಮಂಜು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 23:57 IST
Last Updated 19 ನವೆಂಬರ್ 2025, 23:57 IST
<div class="paragraphs"><p>&nbsp;ಶಾಸಕ ಎ.ಮಂಜು</p></div>

 ಶಾಸಕ ಎ.ಮಂಜು

   

ಹಾಸನ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ಥಿರವಾದರೆ ನಾವು ಲಾಭ ಪಡೆಯಲಿದ್ದೇವೆ. ಮುಂದೆ ಯಾವುದೇ ಬೆಳವಣಿಗೆ ನಡೆದರೂ ಅಚ್ಚರಿ ಇಲ್ಲ’ ಎಂದು ಜೆಡಿಎಸ್‌ ಶಾಸಕ ಎ.ಮಂಜು ಹೇಳಿದರು.

‘ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಗಟ್ಟಿಯಾಗಿದೆ. ಪ್ರಾದೇಶಿಕ ಪಕ್ಷವಾಗಿ ಕಾರ್ಯಕರ್ತರ ಬಲ ಹೊಂದಿದೆ. ಮುಂದೆಯೂ ಜೆಡಿಎಸ್‌ನಿಂದಲೇ ಸ್ಪರ್ಧಿಸುವೆ’ ಎಂದರು.

ADVERTISEMENT

‘ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಸಾಕಷ್ಟು ಹಣ ವ್ಯಯಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕನಿಷ್ಠ ರಸ್ತೆ ಗುಂಡಿ ಮುಚ್ಚಲೂ ಆಗುತ್ತಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.