ADVERTISEMENT

ರಾಜ್ಯದಲ್ಲಿ ಬಿಜೆಪಿ ಸೋಲಿಸುವುದೇ ಮೈತ್ರಿ ಸರ್ಕಾರದ ಉದ್ದೇಶ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 10:00 IST
Last Updated 19 ಮಾರ್ಚ್ 2019, 10:00 IST
   

ಬೆಂಗಳೂರು: ಬಿಜೆಪಿಯನ್ನು ರಾಜ್ಯದಲ್ಲಿ ಸೋಲಿಸುವುದೇ ಮೈತ್ರಿ ಸರ್ಕಾರದ ಮುಖ್ಯ ಉದ್ದೇಶ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮಂಗಳವಾರ ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಮತ್ತು ಎಚ್‌.ಡಿ.ದೇವೇಗೌಡ ಅವರು ಜಂಟಿ ಸುದ್ದಿಗೋಷ್ಠಿನಡೆಸಿ ಮಾತನಾಡಿದರು.

ಎರಡೂ ಪಕ್ಷಗಳಿಂದ ವೀಕ್ಷಕರ ನೇಮಕ ಮಾಡಲಾಗುವುದು ಹಾಗೂ ಇದೇ ಮಾರ್ಚ್‌ 31ರಂದು ಐತಿಹಾಸಿಕ ಜಂಟಿ ಸಮಾವೇಶ ನಡೆಸಲು ಉಭಯ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆಎಂದು ದೇವೇಗೌಡ ಹೇಳಿದರು.

ADVERTISEMENT

ತಮ್ಮ ಸ್ಪರ್ಧೆ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ, ಇದಕ್ಕೆ ಸಾಕಷ್ಟು ಸಮಯ ಇದೆ ಎಂದು ಹೇಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಾಘಟಬಂಧನ ಬಗ್ಗೆ ಮೋದಿ ಲಘುವಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ, ಯಾಕೆಂದರೆ 15 ರಾಜ್ಯಗಳಲ್ಲಿ ಬಿಜೆಪಿ ಕೂಡ ಘಟಬಂಧನ ಸರ್ಕಾರವನ್ನು ನಡೆಸುತ್ತಿದೆ ಈ ಅರಿವು ಅವರಿಗೆ ಇರಬೇಕು ಎಂದರು.

ಉಭಯ ಪಕ್ಷಗಳಲ್ಲಿ ಯಾವೊಬ್ಬ ನಾಯಕರು ಮತ್ತು ಕಾರ್ಯಕರ್ತರುಒಡಕಿನ ಮಾತನಾಡಬಾರದು, ಬಿಕ್ಕಟ್ಟುಇದ್ದರೆ ಪಕ್ಷಗಳ ಮುಖಂಡರ ಬಳಿ ಚರ್ಚಿಸಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಜಂಟಿಸಭೆ ಮತ್ತುಜಂಟಿಸುದ್ದಿಗೋಷ್ಠಿ ಮೈತ್ರಿ ಸರ್ಕಾರದ ಒಗಟ್ಟನ್ನು ಪ್ರತಿನಿಧಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.