ADVERTISEMENT

ಅಳಿದುಳಿದ ಜೆಡಿಎಸ್ ಶಾಸಕರು ಶೀಘ್ರ ಬಿಜೆಪಿಗೆ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 11:13 IST
Last Updated 10 ಜನವರಿ 2020, 11:13 IST
ಗ್ರಾಮಾಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ
ಗ್ರಾಮಾಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹತ್ತು ಜನ್ಮವೆತ್ತಿ ಬಂದರೂ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ. ಅಳಿದುಳಿದ ಜೆಡಿಎಸ್ ಶಾಸಕರೂ ಶೀಘ್ರ ಬಿಜೆಪಿಗೆ ಬರುತ್ತಾರೆ ಎಂದು ಗ್ರಾಮಾಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರಸುದ್ದಿಗಾರರ ಜತೆ ಮಾತನಾಡಿದಅವರು, ‘ಮಂಗಳೂರು ಘಟನೆಯ ಎಷ್ಟು ವೀಡಿಯೊಬಿಡುಗಡೆ ಮಾಡಿದರೂ ಸತ್ಯ ಬದಲಾಗುವುದಿಲ್ಲ. ಅನವಶ್ಯಕವಾಗಿ ಬಿಜೆಪಿಸರ್ಕಾರದಮೇಲೆ ಆರೋಪ ಮಾಡುತ್ತಿದ್ದಾರೆ. ಗಲಭೆಯ ದಿನ ಗೂಂಡಾಗಳು ಮೂಟೆಗಟ್ಟಲೆ ಕಲ್ಲುಗಳನ್ನು ವ್ಯಾನ್, ಲಗೇಜ್ ಆಟೊಗಳಲ್ಲಿ ತುಂಬಿಕೊಂಡು ಬಂದು ಗಲಭೆ ನಡೆಸಿದ್ದಾರೆಎಂಬ ವಾಸ್ತವಎಲ್ಲ ವಾಹಿನಿಗಳು, ಪತ್ರಿಕೆಗಳಲ್ಲಿ ಪ್ರಸಾರವಾಗಿದೆ. ಸತ್ಯ ಕುಮಾರಸ್ವಾಮಿಗೆ ಬೇಕಿಲ್ಲ. ಈ ರಾಜ್ಯದ ಜನರಿಗೆ ನಂಬಿಕೆ ಇದ್ದರೆ ಸಾಕು’ಎಂದು ತಿರುಗೇಟು ನೀಡಿದರು.

‘ತಮ್ಮ ಪಕ್ಷ ಜೀವಂತವಾಗಿದೆ ಎಂದುತೋರಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ.ಕುಮಾರಸ್ವಾಮಿ ರಾಜಕೀಯದಲ್ಲಿ ಕಳೆದುಹೋಗಿದ್ದಾರೆ. ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ವೀಡಿಯೊಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದಂತೆಯೇ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ವರದಿ ಬಂದ ನಂತರ ಹಿಂಸಾಚಾರ, ಗೂಂಡಾಗಿರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕುತಂತ್ರ ರಾಜಕಾರಣಕ್ಕೆ ಬಿಜೆಪಿ ಬಗ್ಗುವುದಿಲ್ಲ. ರಾಜ್ಯದ ಜನ ಈಗಾಗಲೇ ಕಾಂಗ್ರೆಸ್‌ಮೂಲೆ ಗುಂಪು ಮಾಡಿದ್ದಾರೆ, ಜೆಡಿಎಸ್ ಎಲ್ಲಿದೆ ಎಂದು ಹುಡುಕುವ ಸ್ಥಿತಿ ಇದೆ. ಇನ್ನಾದರೂ ಬುದ್ಧಿಕಲಿಯಬೇಕು’ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.