ADVERTISEMENT

ನಿರ್ವಹಣೆಗಾಗಿ ಮೊದಲ ಘಟಕ ಇಂದಿನಿಂದ ಸ್ಥಗಿತ

ವಿಶ್ವ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರದ ಭಾರಜಲ ರಿಯಾಕ್ಟರ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:00 IST
Last Updated 30 ಡಿಸೆಂಬರ್ 2018, 20:00 IST
ಕೈಗಾ ಅಣು ವಿದ್ಯುತ್ ಸ್ಥಾವರ
ಕೈಗಾ ಅಣು ವಿದ್ಯುತ್ ಸ್ಥಾವರ   

ಕಾರವಾರ: ನಿರಂತರವಾಗಿ 962 ದಿನ ವಿದ್ಯುತ್ ಉತ್ಪಾದಿಸಿದ, ಕೈಗಾ ಅಣುವಿದ್ಯುತ್ಸ್ಥಾವರದ ಮೊದಲನೇ ಘಟಕವು ಡಿ.31ರಂದು ಸ್ಥಗಿತಗೊಳ್ಳಲಿದೆ. ಸ್ಥಾವರದ ಸಿಬ್ಬಂದಿ ಮುಂದಿನ 45 ದಿನ ಈ ಘಟಕದ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ.

ಅಡೆತಡೆ ಇಲ್ಲದೇ ಅತಿ ಹೆಚ್ಚು ದಿನ ವಿದ್ಯುತ್ ಉತ್ಪಾದಿಸಿದ ವಿಶ್ವದಮೊದಲ ಘಟಕವೆಂಬ ದಾಖಲೆಯನ್ನುಈ ಘಟಕವು ಡಿ.10ರಂದು ಬರೆದಿದೆ. ಇಲ್ಲಿ ಭಾರಜಲ ಮಾದರಿಯ ರಿಯಾಕ್ಟರ್ ಚಾಲನೆಯಲ್ಲಿದ್ದು, ಈ ದಾಖಲೆ ಎಲ್ಲ ಮಾದರಿಗಳ ಘಟಕಗಳನ್ನೂ ಒಳಗೊಂಡಿದೆ.

‘ಘಟಕವನ್ನು ಡಿ.30ರಂದುಸ್ಥಗಿತಗೊಳಿಸುವುದಾಗಿಈ ಮೊದಲು ತಿಳಿಸಲಾಗಿತ್ತು. ಆದರೆ, ಇನ್ನೊಂದು ದಿನ ಮುಂದುವರಿಸಲು ತೀರ್ಮಾನಿಸಲಾಗಿದೆ. 45 ದಿನಗಳ ಅವಧಿಯಲ್ಲಿರಿಯಾಕ್ಟರ್‌ ಹಾಗೂ ವಿವಿಧ ಯಂತ್ರೋಪಕರಣಗಳ ಬೇರಿಂಗ್, ಬಿಡಿಭಾಗಗಳ ಬದಲಾವಣೆ ಮಾಡಲಾಗುತ್ತದೆ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ನಿರ್ವಹಣೆಗೆ ಅಷ್ಟೊಂದಾಗಿ ದೊಡ್ಡ ವೆಚ್ಚವಾಗುವುದಿಲ್ಲ. ಆದರೆ, ಈಘಟಕವು ದಿನವೊಂದಕ್ಕೆ 51 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದಿಸುತ್ತಿತ್ತು. ಮುಂದಿನ 45 ದಿನ ಇದು ಸಾಧ್ಯವಿಲ್ಲ. ಇದರಿಂದ ಸ್ವಲ್ಪ ನಷ್ಟವಾಗಲಿದೆ. ಆದರೆ, ಇದು ನಿರ್ವಹಣೆಯ ಭಾಗವಾಗಿದೆ.2016ರ ಮೇ 13ರಂದು ಬೆಳಿಗ್ಗೆ 9.20ಕ್ಕೆಚಾಲನೆಯಾದ ಈಘಟಕವು, ಈವರೆಗೆ ಸುಮಾರು 510 ಕೋಟಿ ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆ ಮಾಡಿದೆ’ ಎಂದು ಮಾಹಿತಿ ನೀಡಿದ್ದಾರೆ.

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ನ ಎರಡು ಘಟಕ ಸ್ಥಗಿತ

ಶಕ್ತಿನಗರ (ರಾಯಚೂರು ಜಿಲ್ಲೆ): ವಿದ್ಯುತ್ ಬೇಡಿಕೆ ಕಡಿಮೆಯಾಗಿರುವ ಕಾರಣ ಇಲ್ಲಿಯಆರ್‌ಟಿಪಿಎಸ್‌ನ ಎರಡು ವಿದ್ಯುತ್ ಘಟಕಗಳ ಉತ್ಪಾದನೆಯನ್ನು ಭಾನುವಾರ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಜಲವಿದ್ಯುತ್‌ ಘಟಕಗಳಿಂದ ಉತ್ಪಾದನೆ ಆಗುತ್ತಿರುವುದರಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್‌)210 ಮೆಗಾವಾಟ್ ಸಾಮರ್ಥ್ಯದ 4ನೇ ಹಾಗೂ 250 ಮೆಗಾವಾಟ್ ಸಾಮರ್ಥ್ಯದ 8ನೇ ವಿದ್ಯುತ್ ಘಟಕದ ಉತ್ಪಾದನೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸದ್ಯ ಒಟ್ಟು800 ಮೆಗಾವಾಟ್ ವಿದ್ಯುತ್‌ಉತ್ಪಾದನೆ ಆಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.