ADVERTISEMENT

ಕಲಬುರ್ಗಿ: 44.1 ಡಿಗ್ರಿ ತಾಪಮಾನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:07 IST
Last Updated 26 ಏಪ್ರಿಲ್ 2019, 20:07 IST
ಕಲಬುರ್ಗಿಯಲ್ಲಿ ಶುಕ್ರವಾರ ಪಾದಚಾರಿ ಮಹಿಳೆಯೊಬ್ಬರು ಬಿಸಿಲಿನಿಂದ ಮಗುವನ್ನು ರಕ್ಷಿಸಿದ್ದು ಹೀಗೆ ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್‌.ಜಿ.
ಕಲಬುರ್ಗಿಯಲ್ಲಿ ಶುಕ್ರವಾರ ಪಾದಚಾರಿ ಮಹಿಳೆಯೊಬ್ಬರು ಬಿಸಿಲಿನಿಂದ ಮಗುವನ್ನು ರಕ್ಷಿಸಿದ್ದು ಹೀಗೆ ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ: ನಗರದ ಗರಿಷ್ಠ ತಾಪಮಾನ ಶುಕ್ರವಾರ 44.1 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು.ಪ್ರಸಕ್ತ ವರ್ಷದಲ್ಲಿ ಈ ವರೆಗೆ ದಾಖಲಾದ ಅತಿ ಹೆಚ್ಚು ತಾಪಮಾನ ಇದಾಗಿದೆ.ಕಳೆದ ವರ್ಷ ಇದೇ ದಿನ 42 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಸೂರ್ಯರಶ್ಮಿಗಳು ಬಿಸಿ ಮುಟ್ಟಿಸುತ್ತಿದ್ದವು. ಮಧ್ಯಾಹ್ನ 1ರ ನಂತರ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ದಾಟಿತು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಬೀದಿಬದಿ ವ್ಯಾಪಾರಿಗಳಿಗೆ ಮೈಮೇಲೆ ಕೆಂಡ ಬಿದ್ದ ಅನುಭವ ಉಂಟಾಯಿತು. ಸೂರ್ಯನ ಆರ್ಭಟಕ್ಕೆ ಬೆದರಿದ ಜನ ಮನೆಯಿಂದ ಹೊರಗೆ ಬರಲಿಲ್ಲ.

ಗುರುವಾರ ಮಧ್ಯಾಹ್ನ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ, ಶುಕ್ರವಾರ ಇದ್ದಕ್ಕಿದ್ದಂತೆ ಎರಡು ಡಿಗ್ರಿ ಜಿಗಿದಿದೆ. ಬೆಳಿಗ್ಗೆಯಿಂದಲೇ ಬೀಸುತ್ತಿದ್ದ ಬಿಸಿಗಾಳಿ, ಇಳಿಸಂಜೆಯವರೆಗೂ ಜನರನ್ನು ಹೈರಾಣ ಮಾಡಿತು. ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗಿದ್ದು, 28 ಡಿಗ್ರಿ ದಾಖಲಾಗಿದೆ. ಮೇ ಮೊದಲ ವಾರದಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

***

ತಾಪಮಾನ ಮುನ್ಸೂಚನೆ

ದಿನ ಗರಿಷ್ಠ ಕನಿಷ್ಠ

ಏ.27 42.8 27

ಏ.28 42 27

ಏ.29 43 27

ಏ.30 43 28

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.