ADVERTISEMENT

12ನೇ ತರಗತಿವರೆಗೆ ಕನ್ನಡ ಕಡ್ಡಾಯ; ತ್ರಿ–ಭಾಷಾ ನೀತಿ ಅಳವಡಿಸಲು ಪ್ರಸ್ತಾಪ

ರಾಷ್ಟ್ರೀಯ ಶಿಕ್ಷಣ ನೀತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 6:14 IST
Last Updated 12 ಜುಲೈ 2022, 6:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಡಿ ಭಾಷಾ ಶಿಕ್ಷಣಕ್ಕೆ ಸಂಬಂಧಿಸಿ ದಂತೆ ಸಿದ್ಧಪಡಿಸಿದ ವರದಿಯಲ್ಲಿ (ಪೊಸಿಷನ್ ಪೇ‌ಪರ್‌) 1 ರಿಂದ 12ನೇ ತರಗತಿವರೆಗೆ ‘ತ್ರಿ–ಭಾಷಾ’ ನೀತಿ ಅಳವಡಿಸಲು ಪ್ರಸ್ತಾಪಿಸಲಾಗಿದ್ದು, ಈ ಪೈಕಿ,ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯಗೊಳಿಸಲಾಗಿದೆ.

5ನೇ ತರಗತಿವರೆಗೆ ಮಾತೃಭಾಷೆ ಅಥವಾ ಮನೆ ಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ಕನ್ನಡದಲ್ಲಿ ಬೋಧನೆಯನ್ನು ಪ್ರಸ್ತಾಪಿಸಲಾಗಿದೆ. ಆ ಮೂಲಕ, ಬೋಧನೆಗೆ ದ್ವಿಭಾಷಾ ನೀತಿಗೆ ಅವಕಾಶ ನೀಡಲಾಗಿದೆ. ಅಂದರೆ, ತರಗತಿಯಲ್ಲಿ ಇಂಗ್ಲಿಷ್‌ ಮಾತೃ ಭಾಷೆಯ ಮಕ್ಕಳು ಅಥವಾ ಸ್ಥಳೀಯ ಭಾಷೆ ಗೊತ್ತಿಲ್ಲದ ಇತರ ರಾಜ್ಯಗಳ ಮಕ್ಕಳಿದ್ದರೆ, ಮಾತೃ‌ಭಾಷೆಯ ಜೊತೆಗೆ, ಮನೆ ಭಾಷೆ, ಸ್ಥಳೀಯ ಭಾಷೆ ಅಥವಾ ಕನ್ನಡದ ಜೊತೆಗೆ ಹೆಚ್ಚುವರಿಯಾಗಿ ಇಂಗ್ಲಿಷ್‌ನಲ್ಲಿಯೂ ಬೋಧಿಸಲು ಅವಕಾಶ ಕಲ್ಪಿಸಲಾಗಿದೆ.

ಇತರ ತರಗತಿಗಳಿಗೆ ಬೋಧನಾ ಮಾಧ್ಯಮ ದ್ವಿ ಭಾಷೆಯಲ್ಲಿ ಇರಲಿದೆ. ಮಾತೃಭಾಷೆಯ ಜೊತೆಗೆ ಇಂಗ್ಲಿಷ್‌ ಅಥವಾ ಕನ್ನಡದಲ್ಲಿ ಶಿಕ್ಷಕರು ಬೋಧಿಸಬಹುದು. ಮಕ್ಕಳು ಈ ಎರಡು ಭಾಷೆಗಳ ಪೈಕಿ, ಯಾವುದರಲ್ಲಿ ಬೇಕಾದರೂ ಪರೀಕ್ಷೆಯನ್ನು ಬರೆಯಬಹುದು ಎಂದು ತಜ್ಞರ ಸಮಿತಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.