ADVERTISEMENT

ಕನ್ನಡ ಗೊತ್ತಿದ್ದರಷ್ಟೇ ಉದ್ಯೋಗ

ದುರಂತ ತಡೆಗೆ ಕ್ರಮ–ಕಾರ್ಮಿಕ ಇಲಾಖೆ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 17:41 IST
Last Updated 7 ಡಿಸೆಂಬರ್ 2019, 17:41 IST

ಬೆಂಗಳೂರು: ಕಾರ್ಖಾನೆಗಳಲ್ಲಿ ಸಂವಹನ ಕೊರತೆಯಿಂದ ಸಾವು, ನೋವು ಸಂಭವಿಸುವುದನ್ನು ತಡೆಗಟ್ಟು
ವುದು ಮತ್ತು ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಸಮರ್ಥರಾಗಿರುವವರಿಗೆ ಮಾತ್ರ ‘ಸಿ’ ಮತ್ತು ‘ಡಿ’ ದರ್ಜೆ ಉದ್ಯೋಗ ನೀಡಬೇಕೆಂದು ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) (ತಿದ್ದುಪಡಿ) ನಿಯಮಗಳು 2019ರ ಅಡಿಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ.

2011ರಿಂದ 2019ರವರೆಗೆ ಕನ್ನಡ ಬಲ್ಲವರಿಗಿಂತ ಕನ್ನಡೇತರ ಕಾರ್ಮಿಕರೇ ಅಧಿಕ ಪ್ರಮಾಣದಲ್ಲಿ ಅಪಘಾತಗಳಿಗೆ ತುತ್ತಾಗಿದ್ದಾರೆ ಎಂದು ಇಲಾಖೆ ಪೂರಕ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.