ADVERTISEMENT

‘ಪಠ್ಯದಲ್ಲಿ ಹೆಡಗೇವಾರ್‌: ಕಾಂಗ್ರೆಸ್‌ ಪ್ರತಿಭಟಿಸದಿರುವುದು ಸೋಜಿಗ’

ಗಂಜಿ ಹುಡುಕುತ್ತಿರುವ ಕಾಂಗ್ರೆಸ್‌, ಜೆಡಿಎಸ್‌: ಶಾಸಕ ರಮೇಶ್ ಕುಮಾರ್ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2022, 20:06 IST
Last Updated 25 ಮೇ 2022, 20:06 IST
ಕೆ.ಆರ್. ರಮೇಶ್ ಕುಮಾರ್
ಕೆ.ಆರ್. ರಮೇಶ್ ಕುಮಾರ್   

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ‘ರಾಷ್ಟ್ರಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದ ಮತ್ತು ಕೋಮುವಾದವನ್ನುಜೀವಾಳ ಮಾಡಿಕೊಂಡಿದ್ದಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ವಿಚಾರಗಳು ಪಠ್ಯ ಸೇರುತ್ತಿದ್ದರೂ ಕಾಂಗ್ರೆಸ್ ಪಕ್ಷ ಪ್ರತಿಭಟಿಸದಿರುವುದು ಸೋಜಿಗ’ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಕ್ಕಳು ಓದುವ ಪಠ್ಯಪುಸ್ತಕಗಳಲ್ಲಿ ಕೋಮುವಾದಿಗಳ ಅಟ್ಟಹಾಸ ಮೆರೆಯುತ್ತಿದೆ ಎಂದರು.

‘ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಆ ಹೊತ್ತಿನ ಗಂಜಿ ಹುಡುಕಿಕೊಳ್ಳುತ್ತಿವೆ. ಈ ಪಕ್ಷಗಳಿಗೆ ಕೇವಲ ಹೊತ್ತು ಹೊತ್ತಿಗೆ ಗಂಜಿಯೇ ಮುಖ್ಯವಾಗಿದೆ’ ಎಂದು ಅವರು ಅಸಮಾಧಾನ ಹೊರಹಾಕಿದರು.

ADVERTISEMENT

‘ದೇಶದ ಆಡಳಿತ ಇಂದು ಬಹುವೇಷ ತೊಟ್ಟವರು, ಬಹುಮೂರ್ತಿಗಳದ್ದೇ ಆಗಿದೆ. ಜನಹಿತಕ್ಕಿಂತ ಜನರನ್ನು ಮರುಳುಮಾಡುವ ಮಾತುಗಳೇ ಅಧಿಕವಾಗಿವೆ. ಇದೊಂದು ಬುಡುಬುಡಿಕೆ ಆಳ್ವಿಕೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.