ADVERTISEMENT

ಹಾಲಿವುಡ್‌ನಲ್ಲಿ ಮಲೆನಾಡ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 20:30 IST
Last Updated 11 ಡಿಸೆಂಬರ್ 2019, 20:30 IST
ಪೂರ್ವ
ಪೂರ್ವ   

ಶಿವಮೊಗ್ಗ: ಮಲೆನಾಡಿನ ಪ್ರತಿಭೆ ‘ಪೂರ್ವ’ ಹಾಲಿವುಡ್‌ನಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ.

ಮೊದಲಿ ನಿಂದಲೂಹಾಲಿವುಡ್ ಚಿತ್ರರಂಗದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಅವರು‘ದ ಬಿಗ್ ರಾಂಟ್’ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಮುಂದಿನ ವರ್ಷ ಜನವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಹಾಲಿವುಡ್‌ನ ಹಲವು ಕಿರುಚಿತ್ರಗಳು, ಜಾಹೀರಾತುಗಳಲ್ಲಿ ಅಭಿನಯಿಸಿದ ಅನುಭವ ಅವರಿಗಿದೆ.

ಇವರು ಶಿವಮೊಗ್ಗ ಗೋಪಾಳದ ಶಿವಕುಮಾರ್ ಹಾಗೂ ವೀಣಾ ದಂಪತಿಯ ಪುತ್ರ. 25ರ ಹರೆಯದ ಪೂರ್ವ ಟೆನಿಸ್ ಆಟಗಾರ. ಬೆಂಗಳೂರಿನಲ್ಲಿ ಕ್ರೀಡಾ ತರಬೇತಿ ಪಡೆಯುವಾಗಅಮೆರಿಕದ ವ್ಯಕ್ತಿಯೊಬ್ಬರ ಪರಿಚಯವಾಗಿ ಅಲ್ಲಿಗೆ ತೆರಳಿದ್ದರು.ಲಾಸ್ ಏಂಜಲೀಸ್‌ನಲ್ಲಿ ‘ಎಂಎಫ್‌ಎ ಇನ್ಮಾಸ್ಟರ್ಸ್' ಕೋರ್ಸ್ಪೂರ್ಣಗೊಳಿಸಿ, ಪ್ರಸ್ತುತಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.