ADVERTISEMENT

ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷ

ಹಕ್ಕು ಬಾಧ್ಯತಾ ಸಮಿತಿಗೆ ಯತ್ನಾಳ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 20:46 IST
Last Updated 11 ನವೆಂಬರ್ 2020, 20:46 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (‍ಪಿಎಸಿ) ಅಧ್ಯಕ್ಷರಾಗಿ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎಚ್‌.ಕೆ. ಪಾಟೀಲ ಅವರು ಪಿಎಸಿ ಅಧ್ಯಕ್ಷರಾಗಿದ್ದರು. 2020–21ನೇ ಸಾಲಿನಲ್ಲಿ ವಿಧಾನಮಂಡಲ ಹಾಗೂ ವಿಧಾನಸಭೆಯ ಎಲ್ಲ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೇಮಕ ಮಾಡಿದ್ದಾರೆ.

ಸಮಿತಿಗಳ ಅಧ್ಯಕ್ಷರು: ಅರವಿಂದ ಲಿಂಬಾವಳಿ–ಸಾರ್ವಜನಿಕ ಉದ್ದಿಮೆಗಳ ಸಮಿತಿ, ಎಸ್. ಅಂಗಾರ–ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ, ದಿನಕರ ಶೆಟ್ಟಿ–ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ, ಕುಮಾರ್ ಬಂಗಾರಪ್ಪ– ಅಧೀನ ಶಾಸನ ರಚನಾ ಸಮಿತಿ, ಸಾ.ರಾ. ಮಹೇಶ–ಕಾಗದಪತ್ರಗಳ ಸಮಿತಿ, ಕೆ. ಪೂರ್ಣಿಮಾ–ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ, ಪಿ. ರಾಜೀವ–ಗ್ರಂಥಾಲಯ ಸಮಿತಿ, ಜಿ. ಸೋಮಶೇಖರ ರೆಡ್ಡಿ–ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಮಿತಿ.

ADVERTISEMENT

ವಿಧಾನಸಭೆಯ ಸಮಿತಿಗಳು: ಬಸನಗೌಡ ಪಾಟೀಲ ಯತ್ನಾಳ–ಹಕ್ಕುಬಾಧ್ಯತಾ ಸಮಿತಿ, ಅಭಯ ಪಾಟೀಲ–ಅಂದಾಜು ಸಮಿತಿ, ಕೆ. ರಘುಪತಿ ಭಟ್–ಸರ್ಕಾರಿ ಭರವಸೆಗಳ ಸಮಿತಿ.

ಅರ್ಜಿಗಳು, ವಸತಿ ಸೌಕರ್ಯ ಹಾಗೂ ಖಾಸಗಿ ಸದಸ್ಯರ ವಿಧೇಯಕಗಳು ಹೀಗೆ ಮೂರು ಸಮಿತಿಗಳಿಗೆ ಉಪಾಧ್ಯಕ್ಷ ಆನಂದ ಚಂದ್ರಶೇಖರ ಮಾಮನಿ ಅಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.