ರಾಜ್ಯದಲ್ಲಿ 47,469 ಶಾಲೆಗಳಿದ್ದು, 43.46 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಸ್ವಚ್ಛತಾ ಕೆಲಸವನ್ನು ಹೊರಗುತ್ತಿಗೆ ನೀಡುವ ಕುರಿತು ಚಿಂತನೆ ನಡೆದಿದೆ. ಸಚ್ಛತೆಗಾಗಿ ನೀಡುತ್ತಿರುವ ಮೊತ್ತವನ್ನು ಹೆಚ್ಚಳ ಮಾಡಲಾಗಿತ್ತು. ಮತ್ತೆ ಶೇ 10ರಿಂದ 20ರಷ್ಟು ಹೆಚ್ಚಳ ಮಾಡಲು ಪ್ರಸ್ತಾವ ಸಲ್ಲಿಸಲಾಗುವುದುಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ (ಪ್ರಶ್ನೆ: ರಾಮೋಜಿಗೌಡ, ಕಾಂಗ್ರೆಸ್ ಸದಸ್ಯ)
ರಾಜ್ಯದಲ್ಲಿ 15.59 ಫಲಾನುಭವಿಗಳನ್ನು ಒಳಗೊಂಡ 12.68 ಲಕ್ಷ ಅಕ್ರಮ ಪಡಿತರ ಚೀಟಿಗಳನ್ನು ಪಟ್ಟಿ ಮಾಡಿದ್ದು, ಅವುಗಳನ್ನು ಶೀಘ್ರ ರದ್ದು ಮಾಡಲಾಗುವುದು. ಇಲ್ಲವೇ ಎಪಿಎಲ್ ಪಡಿತರಕ್ಕೆ ಪರಿವರ್ತಿಸಲಾಗುವುದು. ನಿಯಮ ಮೀರಿ ಅಕ್ರಮವಾಗಿ ಪಡೆದ ಪಡಿತರ ಚೀಟಿಗಳನ್ನು ರದ್ದು ಮಾಡಲು ಪಕ್ಷಭೇದ ಮರೆತು ಸಹಕಾರ ನೀಡಬೇಕುಕೆ.ಎಚ್. ಮುನಿಯಪ್ಪ, ಆಹಾರ ಸಚಿವ (ಪ್ರಶ್ನೆ: ಎಂ. ನಾಗರಾಜ್, ಕಾಂಗ್ರೆಸ್ ಸದಸ್ಯ)
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿ, ಮೂರು ವರ್ಷ ಫಲಿತಾಂಶ ಕುಸಿದರೆ ವೇತನಾನುದಾನ ಸ್ಥಗಿತಗೊಳಿಸುವ ಆದೇಶವನ್ನು ತಡೆ ಹಿಡಿಯಲಾಗುವುದುಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ (ಪ್ರಶ್ನೆ: ಎಸ್.ವ್ಹಿ. ಸಂಕನೂರ, ಬಿಜೆಪಿ ಸದಸ್ಯ)
2,878 ಸರ್ಕಾರಿ ಆಸ್ಪತ್ರೆಗಳಲ್ಲಿ 14 ಆಸ್ಪತ್ರೆಗಳು ಅಗ್ನಿ ಸುರಕ್ಷತಾ ವ್ಯವಸ್ಥೆ ಅಳವಡಿಸಿಕೊಂಡಿವೆ. ಉಳಿದ ಆಸ್ಪತ್ರೆಗಳ ಕಟ್ಟಡಗಳಿಗೆ ಅಳವಡಿಸಲು ₹550 ಕೋಟಿ ಅಗತ್ಯವಿದೆ. ನಿಯಮ ಸಡಿಲಿಕೆ ಕುರಿತು ಅಗ್ನಿ ಶಾಮಕ ಸೇವೆಯ ಎಡಿಜಿಪಿ ಜತೆ ಮಾತುಕತೆ ನಡೆದಿದೆದಿನೇಶ್ ಗುಂಡೂರಾವ್, ಆರೋಗ್ಯ ಸಚಿವ (ಪ್ರಶ್ನೆ: ಧನಂಜಯ ಸರ್ಜಿ, ಬಿಜೆಪಿ ಸದಸ್ಯ)
ಸ್ಮಾರ್ಟ್ ಮೀಟರ್ ಅಳವಡಿಕೆಗೆ ದುಬಾರಿ ದರ ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದುಪ್ಪಟ್ಟು ಇದೆ. ಗ್ರಾಹಕರ ದರೋಡೆಗೆ ಸರ್ಕಾರವೇ ಪರವಾನಗಿ ನೀಡಿದೆಸಿ.ಟಿ. ರವಿ, ಬಿಜೆಪಿ ಸದಸ್ಯ
ಈಚೆಗೆ ಕಾಡಾನೆಗಳ ಹಾವಳಿ ಎದುರಿಸುತ್ತಿರುವ ಮಂಗಳೂರಿಗೂ ಒಂದು ಆನೆ ಕಾರ್ಯಪಡೆಯನ್ನು ಶೀಘ್ರವೇ ಮಂಜೂರು ಮಾಡಲಾಗುತ್ತದೆ. ಅಲ್ಲಿ ಆನೆ ಕಾರಿಡಾರ್ ಅನ್ನು ಗುರುತಿಸುವ ಉದ್ದೇಶದಿಂದ ಅಧ್ಯಯನ ಕೈಗೊಳ್ಳಲಾಗುತ್ತದೆ. 550 ಅರಣ್ಯ ವೀಕ್ಷಕರ ಹುದ್ದೆಗೆ ಪ್ರಕ್ರಿಯೆ ನಡೆಯುತ್ತಿದೆ. ಉಳಿದ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುತ್ತದೆ.
–ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಗಮನ ಸೆಳೆಯುವ ಸೂಚನೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ನೀಡಿದ ಉತ್ತರ
‘ಬಿ’ ಖಾತಾ ಇರುವ ಕಟ್ಟಡಗಳಿಗೆ ‘ಎ’ ಖಾತಾ ನೀಡುವ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿಸ್ತರಿಸುವ ಬಗ್ಗೆ ಅಭಿಪ್ರಾಯ ಕೇಳಿ ಕಾನೂನು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಅಕ್ರಮ ಬಡಾವಣೆಗಳ ತೆರವಿಗೆ ಆದೇಶಿಸಲಾಗಿದೆ. ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ.
–ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಅವರು ನಿಯಮ 303ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೀಡಿದ ಉತ್ತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.