ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ತುಳು ಭಾಷೆಗೆ ಅದರದೇ ಆದಂತಹ ಇತಿಹಾಸವಿದೆ ಮತ್ತು ಸಂಸ್ಕೃತಿ ಇದೆ. ತುಳು ದೈವ–ದೇವರುಗಳು ಮಾತಾಡುವಂತಹ ಭಾಷೆ ತುಳು ಹಾಗಾಗಿ ಈ ಭಾಷೆಯನ್ನು ಎರಡನೇ ರಾಜ್ಯಭಾಷೆಯನ್ನಾಗಿ ಘೊಷಿಸಬೇಕು ಎಂದು ಹೇಳಿದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಇವರ ಜಿಲ್ಲೆಗಳಲ್ಲಿ ದೇವರು ಮಾತನಾಡುತ್ತವೆ, ನಮ್ಮ ಜಿಲ್ಲೆಗಳಲ್ಲಿ ದೇವರು ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.