ಬೆಂಗಳೂರು: ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಕ್ಷೇತ್ರಗಳಿಗೆ ಪ್ರಚಾರ ಉಸ್ತುವಾರಿಗಳನ್ನು ನೇಮಕಗೊಳಿಸಿದೆ. ಸಚಿವರು ಮತ್ತು ಶಾಸಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದೆ.
ಶಿಗ್ಗಾವಿ ಕ್ಷೇತ್ರಕ್ಕೆ ಸಚಿವರಾದ ಈಶ್ವರ್ ಖಂಡ್ರೆ, ಎಚ್.ಕೆ ಪಾಟೀಲ್, ಜಮೀರ್ ಅಹಮ್ಮದ್ ಖಾನ್, ಲಕ್ಷ್ಮಿ ಹೆಬ್ಬಾಳಕರ, ತಿಮ್ಮಾಪುರ, ಎಸ್. ಎಸ್ ಮಲ್ಲಿಕಾರ್ಜುನ, ಬೈರತಿ ಸುರೇಶ್ ಮತ್ತು ಶಿವರಾಜ್ ತಂಗಡಗಿ ಅವರನ್ನೊಳಗೊಂಡ ತಂಡವನ್ನು ಪಕ್ಷ ನೇಮಿಸಿದೆ.
ಸಂಡೂರು ಕ್ಷೇತ್ರಕ್ಕೆ ಸಚಿವರಾದ ಎಚ್. ಮುನಿಯಪ್ಪ, ಕೆ.ಜೆ ಜಾರ್ಜ್, ಸಂತೋಷ್ ಲಾಡ್, ನಾಗೇಂದ್ರ, ಜಮೀರ್ ಅಹಮ್ಮದ್ ಖಾನ್, ಪ್ರಿಯಾಂಕ್ ಖರ್ಗೆ ಸೇರಿ ಶಾಸಕರ ತಂಡವನ್ನು ರಚಿಸಲಾಗಿದೆ.
ಸಚಿವ ರಾಮಲಿಂಗ ರೆಡ್ಡಿ, ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕರು ಮತ್ತು ಸಂಸದರನ್ನೊಳಗೊಂಡ ತಂಡವನ್ನು ಚನ್ನಪಟ್ಟಣ ಕ್ಷೇತ್ರಕ್ಕೆ ನೇಮಕ ಮಾಡಲಾಗಿದೆ.
ಸಚಿವರು, ಸಂಸದರು ಮತ್ತು ಶಾಸಕರು ಸೇರಿದಂತೆ 26 ಸದಸ್ಯರ ತಂಡವನ್ನು ಪಕ್ಷ ರಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.