ADVERTISEMENT

ಎರಡು ವಿಷಯದ ಬಗ್ಗೆ ವರಿಷ್ಠರು ತಿಳಿಸಬೇಕಿದೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 4:46 IST
Last Updated 4 ಆಗಸ್ಟ್ 2021, 4:46 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಬೇಕೆಂಬ ಬಗ್ಗೆ ವರಿಷ್ಠರು ಎರಡು ದಿನ ಚರ್ಚೆ ಮಾಡಿದ್ದಾರೆ. ಎರಡು ವಿಷಯಗಳ ಬಗ್ಗೆ ಮಾತ್ರ ವರಿಷ್ಠರು ತಿಳಿಸಬೇಕಿದೆ. ಬೆಳಿಗ್ಗೆ 10 ಗಂಟೆಗೆ ತಿಳಿಸುತ್ತೇನೆ ಎಂದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ವರಿಷ್ಠರು ಯಾವುದೇ ಸಂದರ್ಭದಲ್ಲಿ ತಿಳಿಸಬಹುದು’ ಎಂದರು.

‘ವರಿಷ್ಠರು ತಿಳಿಸಿದ ತಕ್ಷಣ ರಾಜಭವನಕ್ಕೆ ಪಟ್ಟಿ ಕಳುಹಿಸುತ್ತೇನೆ. ಸಚಿವರ ಪಟ್ಟಿಯಲ್ಲಿರುವ ಬಗ್ಗೆ 10 ಗಂಟೆಯ ನಂತರ ಶಾಸಕರಿಗೆ ತಿಳಿಸಲಾಗುತ್ತದೆ. ರಾಜಭವನಕ್ಕೆ ಪಟ್ಟಿ ಕಳುಹಿಸಿದ ಬಗ್ಗೆ ನಿಮಗೂ (ಮಾಧ್ಯಮ) ಹೇಳುತ್ತೇನೆ’ ಎಂದರು.

ADVERTISEMENT

ಸಚಿವ ಸಂಪುಟಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳುವ ಮತ್ತು ಉಪ ಮಖ್ಯಮಂತ್ರಿ ವಿಚಾರದಲ್ಲಿ ವರಿಷ್ಠರು ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.