ಬಿಜೆಪಿ
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಶೇ 40 ರಷ್ಟು ಕಮಿಷನ್ ಕುರಿತ ಆರೋಪದ ತನಿಖೆಗಾಗಿ ನೇಮಿಸಲಾಗಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗದ ಅವಧಿಯನ್ನು ಇದೇ 30 ರವರೆಗೆ ವಿಸ್ತರಿಸಲಾಗಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಹಿಂದಿನ ಅಧ್ಯಕ್ಷ ಡಿ.ಕೆಂಪಣ್ಣ ಅವರ ಆರೋಪ ಆಧರಿಸಿ, 2023 ರ ಆಗಸ್ಟ್‌ನಲ್ಲಿ ಈ ಆಯೋಗವನ್ನು ರಚಿಸಲಾಗಿತ್ತು. ಬಳಿಕ, ಅನೇಕ ಬಾರಿ ಅವಧಿಯನ್ನು ವಿಸ್ತರಿಸಲಾಗಿತ್ತು. ಆಯೋಗದ ಅವಧಿ ಇದೇ ಆಗಸ್ಟ್ 30 ಕ್ಕೆ ಕೊನೆಗೊಂಡಿತ್ತು.
ನಾರಾಯಣಪುರ ಉಪ/ಸೀಳು ಕಾಲುವೆಗೆ ಸಂಬಂಧಿಸಿದ ಗೋಪ್ಯ ಕಡತಗಳು ಮತ್ತು ವಿಚಾರಣಾ ಆಯೋಗದ ಪೀಠೋಪಕರಣ ಹಾಗೂ ಸಾಮಗ್ರಿಗಳನ್ನು ಹಸ್ತಾಂತರಿಸುವುದು ಬಾಕಿ ಇದೆ. ಇದೇ 1 ರಂದು ಸಲ್ಲಿಸಿರುವ ತನಿಖಾ ವರದಿಗೆ ಸಂಬಂಧಿಸಿದ ಗೋಪ್ಯ ಕಡತಗಳನ್ನು ಹಸ್ತಾಂತರಿಸುವುದು ಬಾಕಿ ಇದೆ. ಈ ಕಾರಣದಿಂದ ಅವಧಿ ಮುಂದುವರಿಸುವಂತೆ ಸರ್ಕಾರಕ್ಕೆ ಆಯೋಗ ಬೇಡಿಕೆ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.