ADVERTISEMENT

ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇವಾವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 13:47 IST
Last Updated 29 ಏಪ್ರಿಲ್ 2025, 13:47 IST
<div class="paragraphs"><p>ಅಲೋಕ್ ಮೋಹನ್</p></div>

ಅಲೋಕ್ ಮೋಹನ್

   

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾ ಅವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ. ಅಲೋಕ್ ಅವರು ಮಂಗಳವಾರ ವಯೋನಿವೃತ್ತಿ ಹೊಂದಬೇಕಿತ್ತು.

2023ರ ಮೇ 22ರಂದು ಅಲೋಕ್ ಅವರು ಪ್ರವೀಣ್ ಸೂದ್ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಆರಂಭದ ಮೂರು ತಿಂಗಳು ಪ್ರಭಾರ ಡಿಜಿಪಿಯಾಗಿದ್ದು, ಬಳಿಕ ಅವರನ್ನು ಪೂರ್ಣ ಪ್ರಮಾಣದ ಡಿಜಿಪಿಯಾಗಿ ಸರ್ಕಾರ ನೇಮಿಸಿತ್ತು

ADVERTISEMENT

ಪ್ರಸ್ತುತ ಸೇವಾ ಹಿರಿತನದಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್‌, ಸಿಐಡಿ ಡಿಜಿಪಿ ಡಾ.ಎ.ಎಂ.ಸಲೀಂ ಮತ್ತು ಕೆ.ರಾಮಚಂದ್ರ ರಾವ್ ಹೆಸರು ಪಟ್ಟಿಯಲ್ಲಿದೆ. ಇದರಲ್ಲಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ರಾಮಚಂದ್ರ ರಾವ್‌ಗೆ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ಆದ್ದರಿಂದ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಸಲೀಂ ಹೆಸರು ಮುಂಚೂಣಿಯಲ್ಲಿವೆ.

ಬಿಹಾರ ರಾಜ್ಯದವರಾದ ಪ್ರಶಾಂತ್‌ ಕುಮಾರ್ ಠಾಕೂರ್, 1992ನೇ ಸಾಲಿನ ಕರ್ನಾಟಕ ಕೇಡರ್‌ ಅಧಿಕಾರಿ. ಬೆಂಗಳೂರಿನ ಚಿಕ್ಕಬಾಣಾವರದ ಕನ್ನಡಿಗ ಎ.ಎಂ. ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್ ಅಧಿಕಾರಿ.

ರಾಜ್ಯದಲ್ಲಿ ಡಿಜಿ-ಐಜಿಪಿಯ ಕನಿಷ್ಠ ಅಧಿಕಾರದ ಅವಧಿ ಎರಡು ವರ್ಷ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈ ಆದೇಶದಂತೆ ಅಲೋಕ್‌ ಮೋಹನ್‌ ಅವರನ್ನು ಮೂರು ತಿಂಗಳು ಡಿಜಿಪಿ ಹುದ್ದೆಯಲ್ಲಿ ಮುಂದುವರಿಸುವಂತೆ ಕೋರಿ ಕೇಂದ್ರ ಗೃಹ ಇಲಾಖೆಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ದೊರೆತಿಲ್ಲ.

ಪ್ರಶಾಂತ್ ಕುಮಾರ್ ಠಾಕೂರ್ ಅವರು ಸಲೀಂ ಅವರಿಗಿಂತ ಒಂದು ವರ್ಷ ಸೇವಾ ಹಿರಿತನ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.