ADVERTISEMENT

ರೈತರ ಕಲ್ಯಾಣಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ: ಶೋಭಾ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 22:00 IST
Last Updated 23 ಫೆಬ್ರುವರಿ 2023, 22:00 IST
   

ಬೆಳಗಾವಿ: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾತಿ, ಧರ್ಮಗಳ ಹೆಸರಲ್ಲಿ ಒಡೆದಾಳುವ ರಾಜಕಾರಣ ಮಾಡಿರುವು
ದನ್ನು ಬಿಟ್ಟರೆ, ರೈತರ ಕಲ್ಯಾಣಕ್ಕಾಗಿ ಏನೂ ಮಾಡಿಲ್ಲ’ ಎಂದು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

‘ರೈತರಿಗಾಗಿ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ, ಇಲ್ಲಿ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಚುನಾವಣೆ ಬಂದಾಗ ಹೀಗೆ ಮಾತನಾಡುತ್ತಾರೆ. ಅವರು ತಮ್ಮ ಬೆನ್ನಿನ ಹಿಂದಿನ ಸಂಗತಿಗಳನ್ನು ಒಮ್ಮೆ ತಿರುಗಿ ನೋಡ
ಬೇಕು. ಅವರ ಒಂದು ಬೆರಳು ನಮ್ಮ ಕಡೆ ತೋರಿಸಿದರೆ, ನಾಲ್ಕು ಬೆರಳು ಅವರ ಕಡೆ ತೋರಿಸುತ್ತವೆ. 10 ಬಜೆಟ್‌ ಮಂಡಿಸಿದ್ದೇನೆ ಎನ್ನುವ ಅವರು, ಬಜೆಟ್‌ನಲ್ಲಿ ರೈತರು ಹಾಗೂ ರಾಜ್ಯದ ಜನರ ಅಭಿವೃದ್ಧಿಗೆ ಕೊಡುಗೆ ನೀಡಿದ್ದರೆ, ಇಂದು ಸಮಸ್ಯೆಗಳೇ ಇರುತ್ತಿರಲಿಲ್ಲ’ ಎಂದು ತಿರುಗೇಟು ಕೊಟ್ಟರು.

ADVERTISEMENT

‘ಜನರು ಅವಕಾಶ ಕೊಟ್ಟಾಗ, ಅಭಿವೃದ್ಧಿಗೆ ಶ್ರಮಿಸದೆ ಓಡಿ ಹೋದರು. ಒಂದು ವೇಳೆ ಆಗ ಸಿದ್ದರಾಮಯ್ಯ ಅಭಿವೃದ್ಧಿ ಕೆಲಸ ಕೈಗೊಂಡಿದ್ದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುತ್ತಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.