ADVERTISEMENT

ನೆರೆ ಪರಿಹಾರ ಎಂಬುದು ರೈತರ ಪಾಲಿಗೆ ಕೈಗೆ ಸಿಗದ ಮಾಯಾಜಿಂಕೆಯಾಗಿದೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2021, 9:31 IST
Last Updated 7 ಸೆಪ್ಟೆಂಬರ್ 2021, 9:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರೈತರಿಗೆ ನೆರೆ ಪರಿಹಾರ ಎನ್ನುವುದು ಕೈಗೆ ಸಿಗದ ಮಾಯಾಜಿಂಕೆಯಾಗಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ನೆರೆ ಪರಿಹಾರ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಪ್ರತಿ ವರ್ಷ ಪ್ರವಾಹ ಬಂದಾಗಲೂ ಕೇಂದ್ರದಿಂದ ಅಧ್ಯಯನ ತಂಡ ಬರುತ್ತದೆಯೇ ಹೊರತು ಪರಿಹಾರ ಮಾತ್ರ ಬರುತ್ತಿಲ್ಲ. ಇದು ಡಬಲ್ ಇಂಜಿನ್ ಸರ್ಕಾರ ಎಂದು ಹೆಗ್ಗಳಿಕೆಯಿಂದ ಹೇಳುವವರ ಅಸಲಿ ದುರಾವಸ್ಥೆ’ ಎಂದು ಟೀಕಿಸಿದೆ.

ಪರಿಹಾರವಿಲ್ಲದ ಹಳೆಯ ಸಮೀಕ್ಷೆಗಳು ಏನಾದವು ಎಂದು ಬಿಜೆಪಿಯವರು ಹೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ADVERTISEMENT

‘ನಮ್ಮ ಅಹವಾಲು ಕೇಳಿ ಮುಂದಕ್ಕೆ ತೆರಳಿ’ ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀಪದ ಚಿಚಖಂಡಿ ಗ್ರಾಮದ ರೈತರು, ಸೋಮವಾರ ಪ್ರವಾಹ ಹಾನಿ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡದ ವಾಹನಕ್ಕೆ ಅಡ್ಡ ಹಾಕಿದ್ದರು. ಮನವೊಲಿಸಲು ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರೊಂದಿಗೆ ವಾಗ್ವಾದ ನಡೆಸಿದ್ದರು.

‘ನೀವು (ಕೇಂದ್ರ ತಂಡ) ಬರುತ್ತೀರಿ. ನೋಡಿಹೋಗುತ್ತೀರಿ. ಬಂದು ಹೋಗುವ ನಿಮ್ಮ ಖರ್ಚಿನಷ್ಟು ಮೊತ್ತದ ಪರಿಹಾರವೂ ನಮಗೆ ಸಿಗುವುದಿಲ್ಲ. 2019ರಲ್ಲಿ ಘಟಪ್ರಭಾ ನದಿ ಪ್ರವಾಹದಿಂದ ಆಗಿದ್ದ ಹಾನಿಗೆ ಇನ್ನೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ನೀವು ಬಂದು ಹೋದರೂ ಏನು ಉಪಯೋಗವಿಲ್ಲ’ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.