ADVERTISEMENT

ದಿನದ ಅಂತ್ಯದೊಳಗೆ ವಿಶ್ವಾಸ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಪಾಲರಿಂದ ಸಂದೇಶ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 11:46 IST
Last Updated 18 ಜುಲೈ 2019, 11:46 IST
   

ಬೆಂಗಳೂರು:‘ಇವತ್ತೇ ದಿನದ ಅಂತ್ಯದೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದಾರೆ ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್ ಸದನಕ್ಕೆ ಓದಿ ತಿಳಿಸಿದರು.

ಮಧ್ಯಾಹ್ನ ಊಟದ ವಿರಾಮ ವೇಳೆಯಲ್ಲಿ 3ಗಂಟೆ ವರೆಗೆ ಕಲಾಪ ಮುಂದೂಡಿದ್ದ ವೇಳೆ ಬಿಜೆಪಿಯ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು.

ಇದೇ ದಿನದ ಒಳಗೆ ವಿಶ್ವಾಸಮತ ಸಾಬೀತುಪಡಿಸಿ ಸದನದ ಗೌರವ ಉಳಿಸಿಕೊಳ್ಳಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.‌

ADVERTISEMENT

‘ಸದನದ ಸದಸ್ಯರ ಹಕ್ಕು ರಕ್ಷಿಸುವ ಸಲುವಾಗಿ, ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಇಲ್ಲಿ ಅವಕಾಶ ಸಿಗದೆ ಹೋದರೆ, ಸದಸ್ಯನಾಗಿ ಉಳಿಯಬೇಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ರಾಜ್ಯಪಾಲರು ಈ ಸಂದೇಶ ರವಾನಿಸಿದ್ದರೂ ಸದಸ್ಯರ ಮಾತಿಗೆ ಅವಕಾಶ ನೀಡಬೇಕು. ಸದಸ್ಯರು ಕಾಣೆಯಾಗುತ್ತಿರುವ ಬಗ್ಗೆ ತಿಳಿಯುತ್ತಿಲ್ಲಎಂದು ಶಾಸಕಕೃಷ್ಣ ಬೈರೇಗೌಡ ಆಗ್ರಹಿಸಿದರು.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.