ADVERTISEMENT

ಕಮಿಷನ್‌ ಅವ್ಯವಹಾರ: ಬಿಜೆಪಿ ಆಡಳಿತದ ಬಹುದೊಡ್ಡ ಕೊಡುಗೆ ಎಂದ ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2022, 14:39 IST
Last Updated 24 ಆಗಸ್ಟ್ 2022, 14:39 IST
   

ಬೆಂಗಳೂರು: ರಾಜ್ಯ ಸರ್ಕಾರದ ಕಮಿಷನ್‌ ಅವ್ಯವಹಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರ ದೂರಿನ ಕುರಿತ ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಅವರು, ವಿಧಾನಸೌಧದ ಗೋಡೆಗಳು ‘ಕಾಸು ಕಾಸುʼ ಎನ್ನುತ್ತಿವೆ. ಬಿಜೆಪಿ ಆಡಳಿತದ ಬಹುದೊಡ್ಡ ಕೊಡುಗೆ ಎಂದರೆ ಅದು ಕಮಿಷನ್‌ ಅವ್ಯವಹಾರ ಎಂದು ಹರಿಹಾಯ್ದಿದ್ದಾರೆ.

‘ಶೇ 40 ಇದ್ದ ಬಿಜೆಪಿ ಕಮಿಷನ್‌ ದಂಧೆ ಈಗ ಶೇ 50ಕ್ಕೆ ಏರಿಕೆಯಾಗಿದೆ. ಕಾಮಗಾರಿಗಳಿಗೆ ಬಿಜೆಪಿ ಶೇ 50 ಕಮಿಷನ್‌ ಕೇಳುತ್ತಿದೆ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಆರೋಪಿಸುತ್ತಿದೆ’ ಎಂದು ಟ್ವೀಟಿಸಿದ್ದಾರೆ.

ADVERTISEMENT

‘ಉದ್ಘಾಟನೆಗೊಂಡ ಸ್ಟೇಡಿಯಂ ಗ್ಯಾಲರಿ ಕುಸಿದಿದೆ, ಬೆಂಗಳೂರು- ಮೈಸೂರು ಹೆದ್ದಾರಿ ಉದ್ಘಾಟನೆಗೂ ಮುನ್ನವೇ ಕುಸಿದಿದೆ. ಉದ್ಘಾಟನೆಯಾದ ಒಂದೇ ವಾರಕ್ಕೆ ಶಿವಾನಂದ ಫ್ಲೈಓವರ್‌ ಬ್ರಿಡ್ಜ್‌ ಕುಸಿದಿದೆ. ಇದೆಲ್ಲ ಕಮಿಷನ್‌ ದಂಧೆಯ ಬಹು ದೊಡ್ಡ ಕೊಡುಗೆಗಳಲ್ಲದೆ ಮತ್ತಿನ್ನೇನು’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.