ವರ್ಗಾವಣೆ
ಬೆಂಗಳೂರು: ಕೆಪಿಎಸ್‌ಸಿ ಕಾರ್ಯದರ್ಶಿ ರಮಣದೀಪ್ ಚೌಧರಿ, ನೋಂದಣಿ ಮಹಾ ಪರಿವೀಕ್ಷಕ ಕೆ.ಎ. ದಯಾನಂದ ಸೇರಿ ಹನ್ನೊಂದು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಅಧಿಸೂಚನೆ ಹೊರಡಿಸಿದೆ.
ವರ್ಗಾವಣೆಗೊಂಡವರು: ಆಮ್ಲಾನ್ ಆದಿತ್ಯ ಬಿಸ್ವಾಸ್– ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ನವೀನ್‌ರಾಜ್ ಸಿಂಗ್– ಪ್ರಧಾನ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿ. ಅನ್ಬುಕುಮಾರ್– ಕಾರ್ಯದರ್ಶಿ, ವಸತಿ ಇಲಾಖೆ, ಸಮೀರ್ ಶುಕ್ಲಾ– ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಡಿ. ರಂದೀಪ್– ಕಾರ್ಯದರ್ಶಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರಮಣದೀಪ್ ಚೌಧರಿ– ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ ಇಲಾಖೆ, ಪೊಮ್ಮಲ ಸುನಿಲ್‌ಕುಮಾರ್– ನೋಂದಣಿ ಮಹಾ ಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತ, ಆರ್. ರಾಮಚಂದ್ರನ್ – ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ, ಕೆ.ಎ. ದಯಾನಂದ– ಆಯುಕ್ತ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ, ಇಬ್ರಾಹಿಂ ಮೈಗೂರ್– ನಿರ್ದೇಶಕ (ಐಟಿ), ಕೆಎಸ್‌ಆರ್‌ಟಿಸಿ, ಮನೋಜ್‌ಕುಮಾರ್; ಕಾರ್ಯದರ್ಶಿ, ರೇರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.