ADVERTISEMENT

ಸಂಶೋಧನೆ, ಅಭಿವೃದ್ಧಿ ಕಾರ್ಯಪಡೆ ಅಧ್ಯಕ್ಷರಾಗಿ ಅಶೋಕ ಶೆಟ್ಟರ್‌ ನೇಮಕ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 19:45 IST
Last Updated 22 ನವೆಂಬರ್ 2021, 19:45 IST
ಅಶೋಕ ಶೆಟ್ಟರ್
ಅಶೋಕ ಶೆಟ್ಟರ್   

ಹುಬ್ಬಳ್ಳಿ: ರಾಜ್ಯ ಸರ್ಕಾರ ರಚಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ಆ್ಯಂಡ್ ಡಿ) ಕಾರ್ಯಪಡೆಗೆ ಕೆ.ಎಲ್.ಇ. ಸಂಸ್ಥೆಯ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಶೆಟ್ಟರ್ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಶನಿವಾರ ಕಾರ್ಯಪಡೆ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಕೆಎಲ್‌ಇ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಡಾ.ಅಶೋಕ ಶೆಟ್ಟರ್, ‘ಗುಜರಾತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧ
ಪಟ್ಟಂತೆ ಇನ್ನೋವೇಟಿವ್ ಪಾಲಿಸಿ ಹೆಸರಿನಲ್ಲಿ ತಜ್ಞರ ತಂಡ ರಚಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ರೂಪಿಸಿದ ಈ ಕಾರ್ಯಪಡೆ ಒಟ್ಟಾರೆಯಾಗಿ ಭಿನ್ನವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ದಿಸೆಯ ವಿಶಾಲವಾದ ವ್ಯಾಪ್ತಿ ಒಳಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಮೇಲೆ ಭರವಸೆ ಇಟ್ಟು ಕಾರ್ಯಪಡೆಯ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು ಡಾ. ಅಶೋಕ ಶೆಟ್ಟರ್ ನುಡಿದರು.

ಡಾ. ಅಶೋಕ ಶೆಟ್ಟರ್ ಅವರನ್ನು ಕಾರ್ಯಪಡೆಯ ಅಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿ
ರುವ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು, ತಾಂತ್ರಿಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಮಾಡಿದಂತೆ, ರಾಜ್ಯದ ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯ ಮಾಡಲಿ ಎಂದು ಹಾರೈಸಿದ್ದಾರೆ.

ADVERTISEMENT

ಕಾರ್ಯಪಡೆಯ ಸದಸ್ಯರು

lಪ್ರೊ.ರಾಜೇಶ್ ಸುಂದರೇಶನ್, ಡೀನ್‌,ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌

lಶ್ರೀವರ್ಧಿನಿ ಕೆ.ಝಾ, ಕಾರ್ಯಾಧ್ಯಕ್ಷೆ,ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಉದ್ಯಮಶೀಲತಾ ವಿಭಾಗ

lಎಸ್‌.ಎಂ. ಶಿವಪ್ರಸಾದ, ಪ್ರಾಧ್ಯಾಪಕ,ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ

lಡಾ.ನಂದಿನಿ ಪ್ರಾದ್‌ ಶೆಟ್ಟಿ, ಪ್ರಾಚಾರ್ಯರು, ಮೈಸೂರಿನ ಕೇಂದ್ರದ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಬಯೋಟೆಕ್ನಾಲಾಜಿ ವಿಭಾಗ

lಮಧುಸೂಧನ್‌ ವಿ.ಆತ್ರೆ, ಅತಿಥಿ ಸಂಶೋಧಕ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್

lಬಾಲಾಜಿ ಹೋಳೂರ, ಮುಖ್ಯಸ್ಥ, ಬೆಂಗಳೂರಿನ ಸ್ಯಾಮ್‌ಸಂಗ್‌ ಆರ್‌ ಆ್ಯಂಡ್ ಡಿ ಸಂಸ್ಥೆಯ ಮಲ್ಟಿಮೀಡಿಯಾ ವಿಭಾಗ

lಡಾ.ಅನಂತ ಕೊಪ್ಪರ, ಸಿಇಒ, ಬೆಂಗಳೂರಿನ ಕೆ.ಟು. ಟೆಕ್ನಾಲಜಿ ಕಂಪನಿ

lಪ್ರೊ.ಮೀನಾಕ್ಷಿ ರಾಜೀವ್, ಬೆಂಗಳೂರಿನ ಸೋಷಿಯಲ್ ಮತ್ತು ಎಕನಾಮಿಕ್ ಕೌನ್ಸಿಲ್ ಇನ್‌ಸ್ಟಿಟ್ಯೂಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.