ADVERTISEMENT

ಇನ್ನು ಹೊರಗೆ ಹೋಗುವುದಿದ್ದರೆ ಮಾಸ್ಕ್ ಅಗತ್ಯ: ಆರೋಗ್ಯ ಇಲಾಖೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 12:51 IST
Last Updated 9 ಏಪ್ರಿಲ್ 2020, 12:51 IST
   

ಬೆಂಗಳೂರು: ಎಲ್ಲರೂ ಮುಖಗವಸು (ಮಾಸ್ಕ್‌) ಧರಿಸಬೇಕಾದ ಅಗತ್ಯವಿಲ್ಲ ಎಂದು ಈ ಹಿಂದೆ ಹೊರಡಿಸಿದ್ದ ಪ್ರಕಟಣೆಯಿಂದ ಹಿಂದೆ ಸರಿದಿರುವ ಆರೋಗ್ಯ ಇಲಾಖೆ,ಸಾರ್ವಜನಿಕರು ಅಪರಿಚಿತರೊಂದಿಗೆ ವ್ಯವಹರಿಸುವಾಗಮಾಸ್ಕ್‌ ಧರಿಸುವುದು ಕಡ್ಡಾಯ ಎಂದುಗುರುವಾರ ಹೊಸದಾಗಿಪ್ರಕಟಣೆ ಹೊರಡಿಸಿದೆ.

ಅಗತ್ಯ ವಸ್ತುಗಳ ಖರೀದಿ ವೇಳೆ, ಕಚೇರಿ ಕೆಲಸಗಳಲ್ಲಿ ಭಾಗಿಯಾಗುವಾಗಮತ್ತು ಕೋವಿಡ್‌–19 ಸೋಂಕಿತ ವ್ಯಕ್ತಿಗಳೊಂದಿಗೆ ಗೊತ್ತಿದ್ದುಅಥವಾ ಗೊತ್ತಿಲ್ಲದೆಯೇಸಂಪರ್ಕ ಸಾಧಿಸುವಾಗ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ವಯಸ್ಕರು ಧರಿಸುವ ಮಾಸ್ಕ್‌ ಅಳತೆ 7 ರಿಂದ 9 ಇಂಚು ಮತ್ತು ಮಕ್ಕಳು ಧರಿಸುವ ಮಾಸ್ಕ್‌ ಅಳತೆ 5 ರಿಂದ 7 ಇಂಚು ಇರಬೇಕು ಎಂದು ಶಿಫಾರಸು ಮಾಡಲಾಗಿದೆ. ಬಳಸದೇ ಇರುವ ಬನಿಯನ್‌, ಟೀ ಶರ್ಟ್‌ ಅಥವಾ ಕರವಸ್ತ್ರದಂತಹ ಹಳೆಯ ಹತ್ತಿ ಬಟ್ಟೆಯಿಂದ ಮುಖವಾಡ ಹೊಲಿದುಕೊಳ್ಳಬಹುದು. ಸಿಂಥೆಟಿಕ್‌ ಬಟ್ಟೆಗಳನ್ನು ಬಳಸುವುದು ಸೂಕ್ತವಲ್ಲ ಎಂದೂ ಹೇಳಿದೆ.

ADVERTISEMENT

ಈ ಮಾಸ್ಕ್‌ಗಳನ್ನು ಶುಚಿಗೊಳಿಸಿ ಮರುಬಳಕೆ ಮಾಡಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ಎರಡು ಮಾಸ್ಕ್‌ಗಳನ್ನು ಹೊಂದಿರಬೇಕು. ಆದರೆ,ಬ್ಯಾಕ್ಟೀರಿಯಾ ಮತ್ತು ವೈರಸ್‌ನಿಂದ ತಮ್ಮನ್ನು ತಾವುರಕ್ಷಿಸಿಕೊಳ್ಳಲು ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಮಾಸ್ಕ್‌ಗಳನ್ನು ಮಾತ್ರವೇ ಬಳಸಬೇಕಾಗುತ್ತದೆ ಎಂದೂ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.