ADVERTISEMENT

ಯಾದಗಿರಿ ಪ್ರಕರಣ: ಖುಷಿಯಾದಾಗ ಗಾಳಿಯಲ್ಲಿ ಗುಂಡು; ಗೃಹ ಸಚಿವರ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 19:57 IST
Last Updated 20 ಆಗಸ್ಟ್ 2021, 19:57 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಮಂಗಳೂರು: ‘ಮಲೆನಾಡು ಭಾಗದಲ್ಲಿ ತುಂಬಾ ಖುಷಿಯಾದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತೇವೆ. ಯಾರಾದರೂ ತೀರಿ ಹೋದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಿಸುತ್ತೇವೆ. ಕೊಡಗು– ಮಲೆನಾಡು ಭಾಗದಲ್ಲಿ ಇಂತಹ ಸಂಪ್ರದಾಯ ಇದೆ. ಇನ್ನೂ ಕೆಲವೆಡೆಯೂ ಇಂತಹ ಸಂಪ್ರದಾಯಗಳು ಇರಬಹುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸಚಿವ ಭಗವಂತ ಖೂಬಾ ಯಾದಗಿರಿ ಜಿಲ್ಲೆಗೆ ಈಚೆಗೆ ಭೇಟಿ ನೀಡಿದಾಗ ಖುಷಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿರಬ ಹುದು. ಆದರೆ ಸಾರ್ವಜನಿಕವಾಗಿ ಮಾಡಿದ್ದು ತಪ್ಪು’ ಎಂದರು.

‘ಕೆಲ ವರ್ಷಗಳಿಂದ ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಹೆಚ್ಚಿನ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎನ್ಐಎ ಕಚೇರಿ ಸ್ಥಾಪನೆ ಕುರಿತುಕೇಂದ್ರದ ಜೊತೆಗೆ ಚರ್ಚಿಸುತ್ತೇವೆ’ ಎಂದರು.

ADVERTISEMENT

ಅಫ್ಗಾನಿಸ್ತಾನದಲ್ಲಿ ಅತಂತ್ರರಾಗಿರುವ ಭಾರತೀಯರ ಕರೆತರಲು ಐಪಿಎಸ್‌ ಅಧಿಕಾರಿ ಉಮೇಶ್ ಅವರನ್ನು ರಾಜ್ಯದಿಂದ ನೋಡಲ್ ಅಧಿಕಾರಿ ಯಾಗಿ ನೇಮಿಸ ಲಾಗಿದೆ. ಸಂಕಷ್ಟ ದಲ್ಲಿ ಇರು ವವರು ಅವರನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.