ADVERTISEMENT

ಆಗಸ್ಟ್‌ 11ರಿಂದ ವಿಧಾನಮಂಡಲ ಅಧಿವೇಶನ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 15:55 IST
Last Updated 18 ಜುಲೈ 2025, 15:55 IST
   

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆಗಸ್ಟ್‌ 11 ರಿಂದ ಆರಂಭವಾಗಲಿದೆ. 

ಈ ಸಂಬಂಧ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಕಲಾಪಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಆ.22 ರವರೆಗೆ ಕಲಾಪಗಳು ನಡೆಯಲಿವೆ.

ಆ.15ರ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯ ಸಾರ್ವತ್ರಿಕ ರಜೆ, ಆ.16 ಎರಡನೇ ಶನಿವಾರದ ರಜೆ ಮತ್ತು ಆ.17 ಭಾನುವಾರ ಸರ್ಕಾರಿ ರಜೆ ಆಗಿರುವುದರಿಂದ ಮೂರು ದಿನಗಳು ಕಲಾಪಗಳು ನಡೆಯುವುದಿಲ್ಲ. ಒಟ್ಟು 9 ದಿನಗಳು ಮಾತ್ರ ಕಲಾಪ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.