ಕರ್ನಾಟಕ ಲೇಖಕಿಯರ ಸಂಘದ ಪದಾಧಿಕಾರಿಗಳು
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಟಣೆಯಲ್ಲಿ ತಿಳಿಸಲಾಗಿದೆ.
ಸಂಘದ ನೂತನ ಅಧ್ಯಕ್ಷರಾದ ಡಾ. ಆರ್.ಸುನಂದಮ್ಮ ಅವರು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಹೆಸರನ್ನು ಗುರುವಾರ ಪ್ರಕಟಿಸಿದ್ದಾರೆ.
ಉಪಾಧ್ಯಕ್ಷರಾಗಿ ಡಾ. ಆರ್. ಕೆ. ಸರೋಜ ಹಾಗೂ ಸರ್ವಮಂಗಳಾ, ಕಾರ್ಯದರ್ಶಿಯಾಗಿ ಸುಮಾ ಸತೀಶ್ ಹಾಗೂ ಸಹ ಕಾರ್ಯದರ್ಶಿಯಾಗಿ ಬಿ.ಟಿ. ಅನುರಾಧ, ಖಜಾಂಚಿಯಾಗಿ ಲಲಿತಾ ಹೊಸಪ್ಯಾಟಿ
ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಮುಕ್ತ ಬಿ. ಕಾಗಲಿ, ಕೃಷ್ಣಾಬಾಯಿ ಹಾಗಲವಾಡಿ, ಮಧುರಾ ಕರ್ಣಂ, ಡಾ.ಟಿ.ಟಿ. ಅನುಸೂಯಾ ಹೊಂಬಾಳೆ, ರೇಣುಕಾ ಕೋಡಗುಂಟಿ, ಮಾನಸ ಚಂದ್ರಿಕಾ, ಜ಼ಾಹಿದಾ ಶಿರೀನ್, ಜ್ಯೋತಿ ಎ, ಡಾ. ಮಮತಾ ಕೆ.ಎನ್. ಗೌರಿ, ಸೇರಿದಂತೆ ಒಟ್ಟು 10 ಲೇಖಕಿಯರನ್ನು ಕಾರ್ಯಕಾರಿ ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.