ADVERTISEMENT

ದೇಶದ್ರೋಹಿಗಳಿಗೆ ಕೊಡಬೇಕಾಗಿರುವುದು ಬಿರಿಯಾನಿ ಅಲ್ಲ, ಗುಂಡು: ಸಿ.ಟಿ ರವಿ ಟ್ವೀಟ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:17 IST
Last Updated 29 ಜನವರಿ 2020, 13:17 IST
ಸಿ.ಟಿ. ರವಿ- ಅನುರಾಗ್ ಠಾಕೂರ್
ಸಿ.ಟಿ. ರವಿ- ಅನುರಾಗ್ ಠಾಕೂರ್   

ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ವೇಳೆ ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ ಪ್ರಚೋದನಾಕಾರಿ ಘೋಷಣೆ ಕೂಗಿದ್ದರು. ಠಾಕೂರ್ ಅವರು ಚಪ್ಪಾಳೆ ತಟ್ಟುತ್ತಾ ‘ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಎಂದು ಪ್ರತಿಕ್ರಿಯಿಸುತ್ತಿರುವ ವಿಡಿಯೊ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಅನುರಾಗ್ ಠಾಕೂರ್ ಅವರ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಅದೇ ವೇಳೆಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅನುರಾಗ್ ಠಾಕೂರ್‌ಗೆ ಬೆಂಬಲ ಸೂಚಿಸಿ ಬುಧವಾರಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?

ದೇಶದ್ರೋಹಿಗಳ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆಯನ್ನು ಟೀಕಿಸುತ್ತಿರುವವರು
ಉಗ್ರ ಅಜ್ಮಲ್ ಕಸಬ್ ಮತ್ತು ಯಾಕೂಬ್ಮೆಮನ್ ಸಾವನ್ನು ವಿರೋಧಿಸಿದವರಾಗಿದ್ದಾರೆ.
ತುಕ್ಡೇ ತುಕ್ಡೇ ಗ್ಯಾಂಗ್‌ಗೆ ಬೆಂಬಲ ನೀಡಿದವರಾಗಿದ್ದಾರೆ
ಸಿಎಎ ವಿರುದ್ಧ ಸುಳ್ಳು ಹಬ್ಬಿಸಿದವರರಾಗಿದ್ದಾರೆ.
ದೇಶದ್ರೋಹಿಗಳಿಗೆ ಗುಂಡು ಹೊಡೆಯಬೇಕೇ ಹೊರತು ಬಿರಿಯಾನಿ ಕೊಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.