ADVERTISEMENT

ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಬೇಡ: ಬಿ.ವಿ.ವಸಂತಕುಮಾರ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 4:24 IST
Last Updated 2 ಜೂನ್ 2022, 4:24 IST
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್    

ಬೆಂಗಳೂರು: ‘ರಾಜಕೀಯದಲ್ಲಿ ಅಪಪ್ರಚಾರ ಒತ್ತಡ ತಂತ್ರ ಕುತಂತ್ರಗಳಿದ್ದು, ಅವು ಸಾಹಿತ್ಯ ಕ್ಷೇತ್ರವನ್ನು ಆಕ್ರಮಿಸದಿರಲಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷಗಳಲ್ಲಿ ಸಾಹಿತ್ಯವಿರಲಿ, ಸಾಹಿತ್ಯದಲ್ಲಿ ಪಕ್ಷಗಳು ಬೇಡ. ಪ್ರಾಚೀನ ಕಾಲದಿಂದಲೂ ಕನ್ನಡ ಸಾಹಿತ್ಯವನ್ನು ಜನ ಬದುಕಲೆಂದು ಬರೆಯುವವರ ಪರಂಪರೆ ಇದೆ. ಪಕ್ಷ ರಾಜಕಾರಣ ಮಾಡುವ ಸಾಹಿತಿಗಳೇ ಇಡೀ ಕನ್ನಡ ಸಾಹಿತ್ಯದ ಪ್ರತಿನಿಧಿಗಳಲ್ಲ ಎಂಬುದನ್ನು ಸರ್ಕಾರಗಳು ತಿಳಿದಿರಲಿ ಎಂದಿದ್ದಾರೆ.

‘ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಸಾಹಿತಿಗಳು ಎಂದಾಗಬಾರದು. ಬೇಕಾದರೆ ಆ ಪಕ್ಷಗಳ ಕಾರ್ಯಕರ್ತರು ನಾಯಕರಾಗಿ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆ ತರಲಿ. ತಮ್ಮ ತಮ್ಮ ಸಿದ್ದಾಂತಗಳಿಗೆ ಆಶಯಗಳಿಗೆ ತಕ್ಕಂತೆ ತಂತ್ರ ಪ್ರತಿತಂತ್ರಗಳನ್ನು ಬಳಸಿ, ಭ್ರಷ್ಟಾಚಾರಿಗಳನ್ನು ಸೋಲಿಸಿ ಮನೆಗೆ ಕಳಿಸುವ ಕೆಲಸ ಮಾಡಲಿ. ಸದನಗಳಲ್ಲಿ ಶಿಷ್ಟಾಚಾರಗಳನ್ನು ಜಾರಿಗೆ ತರಲು ಸಾಧ್ಯವೇ ಎಂದು ಪರೀಕ್ಷಿಸಿಕೊಳ್ಳಿ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.