ADVERTISEMENT

ರಾಜ್ಯದಲ್ಲಿ ₹34,432 ಕೋಟಿ ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 21:00 IST
Last Updated 5 ಆಗಸ್ಟ್ 2022, 21:00 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದಲ್ಲಿ ₹ 34,432 ಕೋಟಿ ಮೊತ್ತದ 18 ಹೂಡಿಕೆ ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಶುಕ್ರವಾರ ಅನುಮೋದನೆ ನೀಡಿದೆ.

ಟೊಯೊಟಾ ಮೋಟಾರ್ಸ್‌ ಸೇರಿ ಎಂಟು ಹೊಸ ಕೈಗಾರಿಕೆ ಸ್ಥಾಪನೆಯ ಪ್ರಸ್ತಾವಗಳು ಮತ್ತು 10 ಹೆಚ್ಚುವರಿ ಹೂಡಿಕೆ ಪ್ರಸ್ತಾವಗಳಿಗೆ ಎಸ್‌ಎಚ್‌ಎಲ್‌ಸಿಸಿ ಒಪ್ಪಿಗೆ ನೀಡಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ 48,850 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ‘ಎಥೆನಾಲ್‌, ಏರೋಸ್ಪೇಸ್‌, ಸೆಮಿಕಂಡ
ಕ್ಟರ್‌ ತಯಾರಿಕಾ ಯಂತ್ರಗಳು, ಉಕ್ಕು ತಯಾರಿಕೆ, ಆಟೊಮೊಬೈಲ್‌ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿವೆ’ ಎಂದರು.

ADVERTISEMENT

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಇದ್ದರು.

ಪ್ರಮುಖ ಯೋಜನೆಗಳು:
*ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್- ₹ 3,661.5 ಕೋಟಿ

*ಟ್ರುಯಲ್ಟ್ ಬಯೋಎನರ್ಜಿ ಲಿಮಿಟೆಡ್, ಎಥೆನಾಲ್ ಘಟಕ -₹ 1,856.47 ಕೋಟಿ

*ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಸಂಸ್ಥೆ (ಸೆಮಿಕಂಡಕ್ಟರ್‌ ವಲಯ– ಹೆಚ್ಚುವರಿ)- ₹ 1573 ಕೋಟಿ.

*ಸ್ಪೆಕ್ಟಾಕಲ್ ಲೆನ್ಸ್, ಸ್ಪೆಕ್ಟಾಕಲ್ ಬ್ಲಾಂಕ್ಸ್/ಸೆಮಿ ಫಿನಿಶ್ಡ್ ಲೆನ್ಸ್ ಮತ್ತು ಇಂಡಸ್ಟ್ರಿಯಲ್ ಕ್ವಾಲಿಟಿ ಸಲ್ಯೂಷನ್‌ ಮಷಿನ್‌, ವೈದ್ಯಕೀಯ ಸಲಕರಣೆಯನ್ನು ಉತ್ಪಾದಿಸುವ ಕಾರ್ಲ್ ಝೈಸ್ ಇಂಡಿಯಾ ಪ್ರೈ. ಲಿಮಿಟೆಡ್, (ಹೆಚ್ಚುವರಿ)- ₹ 977 ಕೋಟಿ.

*ಪ್ರಕಾಶ್ ಸ್ಪಾಂಜ್ ಐರನ್ ಎಂಡ್ ಪ್ರೈವೇಟ್‌ ಲಿಮಿಟೆಡ್ (ಹೆಚ್ಚುವರಿ)- ₹ 2,500.09 ಕೋಟಿ.

*ಸೌರ ಕೋಶಗಳನ್ನು ಉತ್ಪಾದಿಸುವ ಎಂವಿ ಫೋಟೊವೋಲ್ಟಾಯಿಕ್ ಪವರ್ ಪ್ರೈವೇಟ್ ಲಿಮಿಟೆಡ್ (ಹೆಚ್ಚುವರಿ) - ₹ 232.15 ಕೋಟಿ.

*ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್, ಎಥೆನಾಲ್ ಘಟಕ(ಹೆಚ್ಚುವರಿ)-
₹ 775.35 ಕೋಟಿ ರೂ.

*ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಎಥೆನಾಲ್ ಘಟಕ (ಹೆಚ್ಚುವರಿ)- ₹ 270.36 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.