ADVERTISEMENT

ನಾಳೆಯಿಂದ ಕಟೀಲು ಬ್ರಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 20:35 IST
Last Updated 20 ಜನವರಿ 2020, 20:35 IST
ಕಟೀಲು ದುರ್ಗಾಪರಮೇಶ್ವರಿ
ಕಟೀಲು ದುರ್ಗಾಪರಮೇಶ್ವರಿ   

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇದೇ 22ರಿಂದ ಫೆಬ್ರುವರಿ 3 ವರೆಗೆ ನಡೆಯಲಿದೆ.

24ರಂದು ಸುವರ್ಣಧ್ವಜ ಪ್ರತಿಷ್ಠೆ, 30ರಂದು ಬ್ರಹ್ಮಕಲಶೋತ್ಸವ, ಫೆಬ್ರುವರಿ 1ರಂದು ನಾಗಮಂಡಲ, 2ರಂದು ಕೋಟಿ ಜಪಯಜ್ಞ, 3ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ.

‘22ರಂದು ಬೆಳಿಗ್ಗೆ 10ಕ್ಕೆ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯ ಸಮಾರಂಭದಲ್ಲಿ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ಅಂದಿನಿಂದ 31ರ ತನಕ ಪ್ರತಿದಿನ ಸಂಜೆ 5ಕ್ಕೆ ಧಾರ್ಮಿಕ ಸಭೆಗಳು ನಡೆಯಲಿದ್ದು, 24ರಂದು ಸುವರ್ಣ ಧ್ವಜ ಪ್ರತಿಷ್ಠೆ ಮತ್ತು 30ರಂದು ಬ್ರಹ್ಮಕಲಶಾಭಿಷೇಕವು ನೆರವೇರಲಿದೆ’ ಎಂದು ಕಟೀಲು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಪ್ರತಿನಿತ್ಯ ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.