ADVERTISEMENT

ಪಿಜಿ ವೈದ್ಯಕೀಯ | ಇಂದು ಸೇವಾ ನಿರತರ ದಾಖಲೆ ಪರಿಶೀಲನೆ: ಕೆಇಎ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 23:31 IST
Last Updated 9 ಫೆಬ್ರುವರಿ 2026, 23:31 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಾದ ಎಂ.ಡಿ./ಎಂ.ಎಸ್.ಗೆ ಲಭ್ಯವಿರುವ ಸೀಟುಗಳಿಗಾಗಿ ಆಸಕ್ತ ಅರ್ಹ ಸೇವಾನಿರತ ಅಭ್ಯರ್ಥಿಗಳು ಫೆಬ್ರುವರಿ 10ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರೊಳಗೆ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಇಲ್ಲಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಗೆ ಪರಿಶೀಲನೆಗೆ ಹಾಜರಾಗುವಂತೆ ಪ್ರಾಧಿಕಾರವು ಸೂಚಿಸಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ 3ನೇ ಸುತ್ತಿನ (ಮಾಪ್-ಅಪ್) ಆನ್‌ಲೈನ್ ಸೀಟು ಹಂಚಿಕೆಗೆ ಇದು ಅನ್ವಯವಾಗುತ್ತದೆ. ದಾಖಲೆಗಳ ಪರಿಶೀಲನೆಯ ನಂತರ ಅರ್ಹರಾಗುವ ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ನಮೂದಿಸಲು ಫೆ.11ರ ಬೆಳಿಗ್ಗೆ 9ರವರೆಗೆ ಅವಕಾಶವಿರುತ್ತದೆ ಎಂದು ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಾದ ಎಂ.ಡಿ./ಎಂ.ಎಸ್.ಗೆ ಪರ್ಸೆಂಟೈಲ್ ಕಡಿತಗೊಳಿಸಿದ ನಂತರ, ಅರ್ಹ ವೈದ್ಯರ ಪಟ್ಟಿಯನ್ನು ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.