ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಗೇಟ್ ಝೀ’ ಲಾಂಜ್‌ ಆರಂಭ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ಜೆನ್‌ ಝೀ ಪ್ರೇರಿತವಾಗಿ ನೂತನವಾಗಿ ಆರಂಭಿಸಿರುವ ‘ಗೇಟ್ ಝೀ’ ಸಾಮಾಜಿಕ ಲೌಂಜ್‌ 
ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ಜೆನ್‌ ಝೀ ಪ್ರೇರಿತವಾಗಿ ನೂತನವಾಗಿ ಆರಂಭಿಸಿರುವ ‘ಗೇಟ್ ಝೀ’ ಸಾಮಾಜಿಕ ಲೌಂಜ್‌    

ದೇವನಹಳ್ಳಿ: ಹೊಸ ತಲೆಮಾರಿನ ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬೆಂಗಳೂರು ಟರ್ಮಿನಲ್–2ರಲ್ಲಿ ಜೆನ್‌ ಝೀ ಪ್ರೇರಿತ ‘ಗೇಟ್ ಝೀ’ ಲಾಂಜ್‌ ಆರಂಭಿಸಲಾಗಿದೆ. ಇದು, ಈ ಸ್ವರೂಪದ ದೇಶದ ಮೊದಲ ಲಾಂಜ್‌ ಆಗಿದೆ.

ವಿಮಾನ ನಿಲ್ದಾಣದಲ್ಲೇ ಕೆಲಸ, ವಿಶ್ರಾಂತಿ ಮತ್ತು ಸಾಮಾಜಿಕ ಸಂವಹನಕ್ಕೆ ಪೂರಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಲಾಂಜ್‌ ವಿನ್ಯಾಸಗೊಳಿಸಲಾಗಿದೆ. ಸಮುದಾಯ ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸುವ ತಾಣವಾಗಿ ಗೇಟ್ ಝೀ ಲಾಂಜ್‌ ರೂಪಿಸಲಾಗಿದೆ.

ಟರ್ಮಿನಲ್–2ರಲ್ಲಿ 080 ಅಂತರ ರಾಷ್ಟ್ರೀಯ ಲಾಂಜ್‌ ಪಕ್ಕದಲ್ಲಿರುವ ಈ ತಾಣವು ಆಧುನಿಕ ವಿನ್ಯಾಸ ಹೊಂದಿದೆ. ಆರಾಮದಾಯಕ ಆಸನ ವ್ಯವಸ್ಥೆ, ಮುದ ನೀಡುವ ಬೆಳಕು, ಸಾಮಾಜಿಕ ಮನಸ್ಥಿತಿಗೆ ಹೊಂದುವಂತೆ ಇರುವ ಶಾಂತ ವಲಯ ಇಲ್ಲಿ ಲಭ್ಯವಿದೆ.

ADVERTISEMENT

ಪರಿಸರ ಸ್ನೇಹಿ ವಸ್ತುಗಳ ಬಳಕೆ ಮತ್ತು ಎಐ ತಂತ್ರಜ್ಞಾನದ ನೆರವಿನಿಂದ ಪ್ರಯಾಣಿಕರ ಅನುಕೂಲ ಹೆಚ್ಚಿಸಲಾಗಿದೆ. ಲಾಂಜ್‌ನಲ್ಲಿ ಬಬಲ್ ಅಂಡ್ ಬ್ರೂ ಕೆಫೆ ಬಾರ್, ಸಿಪ್ಪಿಂಗ್ ಲಾಂಜ್, ಸಬ್‌ವೇ ಡೈನರ್ ಹಾಗೂ ಕಾರ್ಯಕ್ರಮಗಳಿಗೆ ರೂಪಿಸಲಾದ ಅಂಫಿಜೋನ್ ಪ್ರಮುಖ ಆಕರ್ಷಣೆಯಾಗಿವೆ ಎಂದು ಬೆಂಗಳೂರು ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್‌ ಸಿಇಒ ಜಾರ್ಜ್ ಬೆನೆಟ್ ಕುರುವಿಲ್ಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.