ADVERTISEMENT

ಕೋಗಿಲು ಬಡಾವಣೆ ತೆರವು: 26 ಮಂದಿಯಷ್ಟೇ ಅರ್ಹರು; ಸಚಿವ ಜಮೀರ್‌ ಅಹಮದ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:26 IST
Last Updated 8 ಜನವರಿ 2026, 16:26 IST
ಜಮೀರ್‌ ಅಹಮದ್‌ ಖಾನ್‌
ಜಮೀರ್‌ ಅಹಮದ್‌ ಖಾನ್‌   

ಬೆಂಗಳೂರು: ಕೋಗಿಲು ಬಡಾವಣೆಯ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರ ಪೈಕಿ 26 ಮಂದಿಯಷ್ಟೇ ಸರ್ಕಾರದ ವಸತಿ ಸೌಲಭ್ಯ ಪಡೆಯಲು ಅರ್ಹತೆ ಪಡೆದಿದ್ದಾರೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನ ಬುಧವಾರ ಭೇಟಿಯಾಗಿ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಕಾರ್ಯಾಚರಣೆಯ ವೇಳೆ 161 ಮನೆಗಳನ್ನು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡವರ ದಾಖಲೆಗಳನ್ನು ಪರಿಶೀಲಿಸಲಾಗಿದೆ. 26 ನಿವಾಸಿಗಳ ದಾಖಲೆಗಳು ಕ್ರಮಬದ್ಧವಾಗಿವೆ. ಇನ್ನೂ ಕೆಲವರ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

‘ಹೊರಗಿನಿಂದ ಬಂದು ಅನಧಿಕೃತವಾಗಿ ನೆಲಸಿದ್ದ ಯಾರಿಗೂ ಮನೆಗಳನ್ನು ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದು ಚರ್ಚಿಸಿದ್ದಾರೆ. ಅರ್ಹರಿಗೆ ಮನೆಗಳನ್ನು ನೀಡಲು ಸೂಚಿಸಿದ್ದಾರೆ. ಕರ್ನಾಟಕದ ಬೇರೆ ಭಾಗದಿಂದ ಬಂದು ಕೋಗಿಲು ಬಡಾವಣೆಯಲ್ಲಿ ಐದು ವರ್ಷದಿಂದ ವಾಸವಿದ್ದವರು, ಅದೇ ಬಡಾವಣೆಯ ವಿಳಾಸದಲ್ಲಿ ರೇಷನ್‌ ಕಾರ್ಡ್‌, ಮತದಾರರ ಗುರುತಿನ ಪತ್ರ, ಮಕ್ಕಳ ಶಾಲಾ ದಾಖಲಾತಿಗಳನ್ನು ಹೊಂದಿದ್ದವರಿಗೆ ಆದ್ಯತೆ ನೀಡಲಾಗಿದೆ’ ಎಂದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.