ADVERTISEMENT

ಯುವ ಕಾಂಗ್ರೆಸ್ಸಿನ ಉದ್ಯೋಗ ಸೃಷ್ಟಿ ವೆಬ್‌ಸೈಟ್‌ಗೆ ಡಿಕೆಶಿ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 17:34 IST
Last Updated 10 ಸೆಪ್ಟೆಂಬರ್ 2022, 17:34 IST
   

ಬೆಂಗಳೂರು:‘ಯುವಧ್ವನಿ ನಮ್ಮ ಧ್ವನಿಯಾಗಬೇಕು ಎಂಬ ಧ್ಯೇಯ ಇಟ್ಟು ಕೊಂಡುಯುವ ಕಾಂಗ್ರೆಸ್ಸಿನ ಉದ್ಯೋಗ ಸೃಷ್ಟಿ ವೆಬ್‌ಸೈಟ್‌ ಆರಂಭಿಸಿದ್ದೇವೆ. ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ ಕೇವಲ ಟೀಕೆ ಮಾಡದೆ, ಅವರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್ಸಿನ ಉದ್ಯೋಗ ಸೃಷ್ಟಿ ವೆಬ್‌ಸೈಟ್‌ ಅನ್ನು (www.udyogasrishti.in) ಶನಿವಾರ ಉದ್ಘಾಟಿಸಿ ಮಾತನಾ ಡಿದ ಅವರು, ‘ಇಡೀ ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡ ಲಾಗಿದೆ. ಈಗಾಗಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ 40 ಸಾವಿರ ನಿರುದ್ಯೋಗಿಗಳ ಹೆಸರು ನೋಂದಣಿ ಮಾಡಿಸಿದ್ದಾರೆ’ ಎಂದರು.

‘ನೇಮಕಾತಿಯಲ್ಲಿನ ಭ್ರಷ್ಟಾಚಾರ ದೊಡ್ಡ ಕಳಂಕ. ಇತ್ತೀಚೆಗೆ ಯುವಕರು ಯಾವುದೇ ಪಕ್ಷದ ಕರೆ ಇಲ್ಲದೆ ತಾವಾಗಿಯೇ ಉದ್ಯೋಗಸೌಧದ ಮುಂದೆ ಪ್ರತಿಭಟನೆ ಮಾಡಿದ್ದನ್ನು ನಾವು ನೋಡಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಯುವಕರ ಬದುಕಿನಲ್ಲಿ ಆಶಾಕಿರಣ ಮೂಡಿಸಿ, ಖಾಸಗಿ ಉದ್ಯೋಗ ಸೃಷ್ಟಿಸುವುದರ ಜತೆಗೆ ಸರ್ಕಾರಿ ಉದ್ಯೋಗ ತುಂಬಬೇಕು ಎಂದು ಧ್ವನಿ ಎತ್ತಲು ಅವರು ಹೆಸರು ನೋಂದಣಿ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಹಮ್ಮಿಕೊಂಡಿರುವ ‘ಭಾರತ ಒಗ್ಗೂಡಿಸಿ’ ಅವರ ಜತೆ ಹೆಜ್ಜೆ ಹಾಕಲು ಬಯಸುವವರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ರಾಜ್ಯದಲ್ಲಿ 21 ದಿನ ಯಾತ್ರೆ ಸಾಗ ಲಿದ್ದು,ಎರಡು ಕಡೆಗಳಲ್ಲಿ ರಾಹುಲ್ ಗಾಂಧಿ ಜೊತೆ ನಿರುದ್ಯೋಗಿ ಯುವಕರಿಗೆ ಚರ್ಚೆಗೆ ಅವಕಾಶ ನೀಡುತ್ತೇವೆ’ ಎಂದರು.

‘ಎಲ್ಲರಿಗೂ ಸರ್ಕಾರ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪು ತ್ತೇವೆ. ಆದರೆ, ಖಾಸಗಿ ಉದ್ಯೋಗ ಸೃಷ್ಟಿಯ ಬಗ್ಗೆ ಹೆಚ್ಚು ಗಮನಹರಿಸ
ಬೇಕು. ಕೇವಲ ಬೆಂಗಳೂರು ಮಾತ್ರವಲ್ಲ, ಎಲ್ಲ ಕಡೆಗಳಲ್ಲೂ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಿ ಯುವಕರ ಬದುಕಿನಲ್ಲಿ ಬೆಳಕು ತರಬೇಕು. ಅದಕ್ಕಾಗಿ ನೀತಿ ರೂಪಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.