ADVERTISEMENT

ಕೆಪಿಟಿಸಿಎಲ್ ನೇಮಕಾತಿ ‌ಪರೀಕ್ಷೆ: ಅಂಗಿಯ ತೋಳಿಗೆ ಕತ್ತರಿ

ಕೆಪಿಟಿಸಿಎಲ್ ನೇಮಕಾತಿ ‌ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 20:29 IST
Last Updated 7 ಆಗಸ್ಟ್ 2022, 20:29 IST
ಕೊಪ್ಪಳದ ಪರೀಕ್ಷಾ ಕೇಂದ್ರದ ಹೊರಗಡೆ ಭಾನುವಾರ ಅಭ್ಯರ್ಥಿಗಳು ಕತ್ತರಿಸಿ ಇಟ್ಟಿದ್ದ ಅಂಗಿಯ ತೋಳುಗಳು
ಕೊಪ್ಪಳದ ಪರೀಕ್ಷಾ ಕೇಂದ್ರದ ಹೊರಗಡೆ ಭಾನುವಾರ ಅಭ್ಯರ್ಥಿಗಳು ಕತ್ತರಿಸಿ ಇಟ್ಟಿದ್ದ ಅಂಗಿಯ ತೋಳುಗಳು   

ಕೊಪ್ಪಳ: ಭಾನುವಾರ ಇಲ್ಲಿ ‌ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ‌ಪರೀಕ್ಷೆಯಲ್ಲಿ ಪೂರ್ಣ ತೋಳಿನ ಅಂಗಿ ಹಾಕಿಕೊಂಡು ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿ ಕೇಂದ್ರದ ಒಳಗೆ ಅವಕಾಶ ನೀಡಲಿಲ್ಲ.

ಆದ್ದರಿಂದ ಪೂರ್ಣ ತೋಳಿನ ಅಂಗಿ ಧರಿಸಿದ್ದವರು, ತೋಳಿನ ಭಾಗ ಅದನ್ನು ಕತ್ತರಿಸಿ ಹೊರಗಡೆ ಇಟ್ಟು ಪರೀಕ್ಷೆ ಬರೆದಿದ್ದಾರೆ‌. ಕೊಪ್ಪಳದ ಭಾಗ್ಯನಗರದ ನವಚೇತನ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಪಿಎಸ್ಐ ನೇಮಕಾತಿ ಅಕ್ರಮದಿಂದಾಗಿ ಇತರೆ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ನಿಯಮ ‌ಜಾರಿ‌ ಮಾಡಲಾಗಿದೆ. ಪೂರ್ಣ ತೋಳಿನ ಅಂಗಿ ಧರಿಸದಂತೆ ಪ್ರವೇಶ ಪತ್ರದಲ್ಲಿ ಮೊದಲೇ ಸೂಚಿಸಲಾಗಿತ್ತು. ಆದರೂ, ಕೆಲವರು ಅದೇ ರೀತಿಯ ಅಂಗಿ ಧರಿಸಿ ಬಂದಿದ್ದರು. ಪೂರ್ಣ ತೋಳಿನ ಅಂಗಿ ಬದಲಿಸಲು ಸಿಬ್ಬಂದಿ ಸೂಚಿಸಿದ್ದಾರೆ. ಕೆಲವರು ಹೊಸ ಟೀ ಶರ್ಟ್‌ ಖರೀದಿಸಿದರೆ, ಇನ್ನೂ ಕೆಲವರು ಅಂಗಿಯ ತೋಳಿನ ಭಾಗವನ್ನು ಕತ್ತರಿಸಿ ಕೇಂದ್ರದ ಹೊರಗಿಟ್ಟು ಪರೀಕ್ಷೆ ಬರೆದರು.

ADVERTISEMENT

ನವಚೇತನ ಪಬ್ಲಿಕ್ ಶಾಲೆಯ ಪ್ರಾಚಾರ್ಯಾರಾದ ಸಂಗೀತಾ ಕಲ್ಲೇಶ, ‘ಪೂರ್ಣ ತೋಳಿನ ಅಂಗಿ ಧರಿಸಿ ಬರಬಾರದು ಎಂದು ಮೊದಲೇ ಸೂಚಿಸಿದ್ದೆವು. ಸೂಚನಾ ಫಲಕವನ್ನು ಹಾಕಿದ್ದೆವು. ಆದರೂ ಅಭ್ಯರ್ಥಿಗಳು ಎಚ್ಚೆತ್ತುಕೊಂಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.