ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ ಗೂಂಡಾಗಳ ಲೀಡರಾ?: ಈಶ್ವರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 8:36 IST
Last Updated 26 ಡಿಸೆಂಬರ್ 2018, 8:36 IST
   

ಬಾಗಲಕೋಟೆ: ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಆರೋಪಿಗಳ ಶೂಟೌಟ್‌ಗೆ ಸೂಚಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೂಂಡಾಗಳ ಲೀಡರಾ? ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿಕೆ ಗಮನಿದರೆ, ‘ಅವರು ಸಿಎಂ ಹೌದೋ ಅಲ್ಲವೋ ಅನ್ನೋ ಅನುಮಾನ ಮೂಡುತ್ತಿದೆ’ ಎಂದರು.

ಕೊಲೆ ಮಾಡಿದವರನ್ನು ಹಿಡಿಯಿರಿ ಎಂದು ಹೇಳಬೇಕಿತ್ತು. ಬದಲಿಗೆಶೂಟೌಟ್ ಮಾಡಿ ಎಂದು ಯಾರೋ ಗೂಂಡಾ ಲೀಡರ್ ಹೇಳಿದಂತೆ ಹೇಳಿದ್ದಾರೆ.ಕೊಲೆ ಪ್ರಕರಣವನ್ನು ಖಂಡಿಸುತ್ತೇನೆ.ಕುಮಾರಸ್ವಾಮಿ ಅವರ ದುಃಖಕ್ಕೆ ಭಾಗಿಯಾಗ್ತೀನಿ ಎಂದುಪ್ರತಿಕ್ರಿಯಿಸಿದರು.

ADVERTISEMENT

ಹಿಂದೂ ಯುವಕರ ಕೊಲೆಯಾದಾಗ ಕುಮಾರಸ್ವಾಮಿ, ಸಿದ್ದರಾಮಯ್ಯ ಶೂಟೌಟ್ ಮಾಡಿ ಅಂತ ಹೇಳಿರಲಿಲ್ಲ.ಹಿಂದೂ ಯುವಕರ ಕೊಲೆಯಾದಾಗ ಇವರಿಗೆ ಏನೂ ಅನಿಸಲಿಲ್ಲ.ಸ್ವಂತ ರಾಜಕಾರಣಕ್ಕೆ ಸಹಕಾರ ಕೊಡ್ತೀರೋರು ಕೊಲೆಯಾದ್ರೆ ಎಚ್‌ಡಿಕೆಗೆ ನೋವು ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಹಿಂದೂ ಯುವಕರ ಕೊಲೆಗೊಂದು..ನಿಮ್ಮ ಸ್ನೇಹಿತರು ಕೊಲೆಯಾದಗೊಂದು ನ್ಯಾಯವೇ? ಎಂದು ಪ್ರಶ್ನಿಸಿದರು.

ಶೂಟೌಟ್ ಮಾಡಿ ಎಂದು ನಾನು ಸಿಎಂ ಆಗಿ ಹೇಳಿಲ್ಲಂತಾರೆ.ನೀವು ಸಿಎಂ, ಶಾಸಕರಾಗಿ ಹೇಳಿದ್ದೀರೋ ಗೊತ್ತಿಲ್ಲ.ನಿಮ್ಮ ಬಾಯಿಯಲ್ಲಿ ಶೂಟೌಟ್ ಪದ ಬರಕೂಡದು ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಅರ್ಥವಾಗಿರಬೇಕು.ಸರ್ಕಾರ ನಿಮ್ಮ ಕೈಯಲ್ಲಿದೆ. ಸರ್ಕಾರವನ್ನು ಸರಿಯಾಗಿ ನಡೆಸಲಿಕ್ಕೆ ಆಗುತ್ತಿಲ್ಲ ಅನ್ನೋದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ ಎಂದೂ ಹೇಳಿದರು.

ಕಾಂಗ್ರೆಸ್‌ನಲ್ಲಿ ಬೇಗುದಿ

ಶಾಸಕರಮೇಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ಕೈಗೆ ಸಿಗದಿರುವುದು ಆ ಪಕ್ಷದೊಳಗಿನ ಬೇಗುದಿಯನ್ನು ಬಿಂಬಿಸುತ್ತದೆ.ರಮೇಶ್‌ರಾಜಿನಾಮೆ ಕೊಡ್ತೀನಿ ಎಂದು ಹೇಳಿದ್ದಾರೆ.ಮುಂದಿನ ವಿಚಾರ ಅವರಿಗೆ ಬಿಟ್ಟಿದ್ದು.ರಮೇಶ್ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಮಾಧ್ಯಮದವರ ಸೃಷ್ಟಿ ಎಂದ ಈಶ್ವರಪ್ಪಆಪರೇಷನ್ ಕಮಲವೆಂದು ನಮ್ಮ ಮೇಲೆ ಗೂಬೆ ಕೂರಿಸಬೇಡಿ.ಅವರೇ ಗುಂಡಿಯಲ್ಲಿ ಬಿದ್ದು ಹೋದ್ರೆ ನಾವೇನು ನೋಡ್ತಾ ಕುಳಿತು ಕೊಳ್ಳಬೇಕಾ..?ಎಂದು ಪ್ರಶ್ನಿಸಿದರು.

ಕಾಂಗ್ರೆಸ್, ಜೆಡಿಎಸ್‌ನಲ್ಲಿ ಗುಂಪುಗಾರಿಕೆಯಿದೆ. ಅಧಿಕಾರದ ದಾಹ, ನಾಯಕತ್ವದ ಸ್ವಾರ್ಥ ನೋಡಿದ್ರೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಅಸ್ಥಿರತೆ ದೂರವಾಗಬೇಕು.ಜನತೆ ಬಿಜೆಪಿಗೆ ಪೂರ್ಣ ಬಹುಮತ ಕೊಟ್ಟಿಲ್ಲ.ವಿರೋಧಪಕ್ಷದಲ್ಲಿದ್ದು ನಮ್ಮ ಕೆಲಸ ಮಾಡ್ತೀವಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.